ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಬಾರಿಯ ಆಡಳಿತದಲ್ಲಿ 72 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಧಾನಿಯಾ ಮೂರನೇ ಬಾರಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದರೆ, ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರತಿಜ್ಞಾ ವಿಧಿ ಬೋದಿಸಿದರು.
ಪ್ರಧಾನಿ ಮೋದಿ ಜೊತೆಯಲ್ಲೇ 72 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 24 ರಾಜ್ಯಗಳಿಗೆ ಮಣೆ ಹಾಕಲಾಗಿದ್ದು, ಎನ್ ಡಿಎ ಮೈತ್ರಿ ಪಕ್ಷದ 11 ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ ದೊರೆತಿದೆ.
72 ಸಚಿವರ ಪೈಕಿ 30 ಮಂದಿ ಸಂಪುಟ ದರ್ಜೆ ಹಾಗೂ 5 ಸಂಸದರಿಗೆ ಸ್ವತಂತ್ರ ಖಾತೆ ಹಾಗೂ 36 ಸಂಸದರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
10 ವರ್ಷಗಳ ಕಾಲ ಯುಪಿಎ ನಂತರ ಅತ್ಯಂತ ಯಶಸ್ವಿ ಮೋದಿ ಸರ್ಕಾರ ಆಡಳಿತ ನೀಡಿದ್ದು, ಇದೀಗ ನೆಹರು ನಂತರ ಸತತ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವ ಕಾರಣ ಭಾನುವಾರ ಸಂಜೆ 730ರ ಸುಮಾರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.