ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ದುಗೊಳಿಸಿ ಅದರ ಬದಲಿಯಾಗಿ ಕೇಂದ್ರ ಸರ್ಕಾರ ರೂಪಿಸಿದ್ದ ಜಿ ರಾಮ್ ಜಿ ಮಸೂದೆ ಭಾರೀ ಗದ್ಧಲಗಳ ನಡುವೆ ಲೋಕಸಭೆಯಲ್ಲಿ ಅನುಮೋದನೆ ಪಡೆದಿದೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಸೂದೆಯನ್ನು ಪುನರ್ ಪರಿಶೀಲನಾ ಸಮಿತಿ ಮುಂದೆ ಇಡಬೇಕು ಎಂದು ಆಗ್ರಹಿಸಿದವು. ಆಡಳಿತ ಪಕ್ಷ ಇದನ್ನು ವಿರೋಧಿಸಿ ಮಸೂದೆ ಮತಕ್ಕೆ ಹಾಕಲು ಮುಂದಾದಾಗ ಪ್ರತಿಪಕ್ಷಗಳು ಕಾಗದ ಪತ್ರಗಳನ್ನು ಹರಿದು ಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಿಯಾಂಕಾ ಗಾಂಧಿ, ಡಿಎಂಕೆ ಮುಖಂಡ ಟಿಆರ್ ಬಾಲು, ಸಮಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಮಸೂದೆಯನ್ನು ವಿರೋಧಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ಹೆಸರನ್ನು ಯೋಜನೆಯಿಂದ ಕೈಬಿಡುವುದು ರಾಷ್ಟ್ರಪಿತನಿಗೆ ಮಾಡಿದ ಅಪಮಾನ. ಅಲ್ಲದೇ ಈ ಯೋಜನೆಯಿಂದ ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಪ್ರತಿಪಕ್ಷ ಸಂಸದರು ಆರೋಪಿಸಿದರು.
ಮಸೂದೆಯ ಪರವಾಗಿ ವಾದ ಮಂಡಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ಕಾನೂನುಗಳಿಗೆ ಗಾಂಧಿ, ನೆಹರೂ ಹೆಸರಿಟ್ಟಿದ್ದು, ಈಗ ಎನ್‌ಡಿಎ ಸರ್ಕಾರವನ್ನು ಪ್ರಶ್ನಿಸುತ್ತಿದೆ ಎಂದು ಹೇಳಿದರು.
LokSabha passes The Viksit Bharat – Guarantee for Rozgar and Ajeevika Mission (Gramin): VB – G Ram G Bill, 2025.
इसका उद्देश्य ग्रामीण क्षेत्रों में रोज़गार और आजीविका की सुरक्षा सुनिश्चित करना है।
यह विधेयक मौजूदा महात्मा गांधी राष्ट्रीय ग्रामीण रोज़गार… pic.twitter.com/SIbw1A2paC
— SansadTV (@sansad_tv) December 18, 2025
ಪ್ರಿಯಾಂಕಾ ಗಾಂಧಿಯವರ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಸರ್ಕಾರಕ್ಕೆ ಹೆಸರು ಬದಲಾಯಿಸುವ ಹುಚ್ಚು ಇದೆ ಎಂದು ಅವರು ಹೇಳಿದರು. ಹೆಸರು ಬದಲಾಯಿಸುವ ಹುಚ್ಚು ವಿರೋಧ ಪಕ್ಷಗಳಿಗೆ ಇದೆ ಮತ್ತು ನರೇಂದ್ರ ಮೋದಿ ಸರ್ಕಾರ ಕೆಲಸದ ಮೇಲೆ ಮಾತ್ರ ಗಮನಹರಿಸಿದೆ ಎಂದು ಚೌಹಾಣ್ ಹೇಳಿದರು. ಎಂಜಿಎನ್‌ಆರ್‌ಇಜಿಎ ಭ್ರಷ್ಟಾಚಾರದ ಸಾಧನವಾಗಿದೆ ಎಂದು ಅವರು ಹೇಳಿದರು ಮತ್ತು ಪಾಲುದಾರರೊಂದಿಗೆ ಚರ್ಚಿಸಿದ ನಂತರ ಹೊಸ ಕಾನೂನನ್ನು ತರಲಾಗಿದೆ ಎಂದು ಒತ್ತಿ ಹೇಳಿದರು.
ವಿರೋಧ ಪಕ್ಷಗಳು ಸುಮ್ಮನಾಗಲಿಲ್ಲ ಮತ್ತು ಹಲವಾರು ಸಂಸದರು ಮಸೂದೆಯ ವಿರುದ್ಧ ಬಾವಿಗಿಳಿದು ಪ್ರತಿಭಟಿಸಲು ಪ್ರಾರಂಭಿಸಿದರು. ನಂತರ ಕೆಲವರು ಕಾಗದಪತ್ರಗಳನ್ನು ಹರಿದು ಹಾಕಿದರು. ಸ್ಪೀಕರ್ ಓಂ ಬಿರ್ಲಾ, “ಜನರು ನಿಮ್ಮನ್ನು ಕಾಗದಪತ್ರಗಳನ್ನು ಹರಿದು ಹಾಕಲು ಇಲ್ಲಿಗೆ ಕಳುಹಿಸಿಲ್ಲ. ರಾಷ್ಟ್ರವು ನಿಮ್ಮನ್ನು ನೋಡುತ್ತಿದೆ” ಎಂದು ಹೇಳಿದರು.
ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಕೇಂದ್ರ ಸರ್ಕಾರ ನಾಳೆ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲು ಮುಂದಾಗಿದೆ. ರಾಜ್ಯಸಭೆಯಲ್ಲೂ ಅನುಮೋದನೆ ದೊರೆತ ಕೂಡಲೇ ರಾಷ್ಟ್ರಪತಿ ಸಮ್ಮತಿಗೆ ತೆರಳಲಿದೆ. ರಾಷ್ಟ್ರಪತಿ ಅನುಮೋದನೆ ನೀಡಿದ ಕೂಡಲೇ ಮಸೂದೆ ಜಾರಿಗೆ ಬರಲಿದೆ.


