ರಾಜಧಾನಿ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 7 ಆನೆಗಳ ಸ್ಥಳದಲ್ಲೇ ಮೃತಪಟ್ಟಿದ್ದು, 5 ಬೋಗಿಗಳು ಹಳಿ ತಪ್ಪಿದ ಭೀಕರ ಘಟನೆ ಅಸ್ಸಾಂನಲ್ಲಿ ಸಂಭವಿಸಿದೆ.
ಸೈರಾಂಗ್-ದೆಹಲಿ ರಾಜಸ್ಥಾನಿ ಎಕ್ಸ್ ಪ್ರೆಸ್ ರೈಲು ಅಸ್ಸಾಂನ ಹೊಜಯ್ ನಲ್ಲಿ ಶನಿವಾರ ಮುಂಜಾನೆ ಈ ದುರಂತ ಸಂಭವಿಸಿದ್ದು, ಹಲವಾರು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ 7 ಆನೆಗಳು ಮೃತಪಟ್ಟಿದ್ದು, ಒಂದು ಆನೆ ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕನಿಗೆ ಅಪಾಯ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಿಂದ ಬರುತ್ತಿದ್ದ ರೈಲು ಶನಿವಾರ ಮುಂಜಾನೆ 2.17 ಗಂಟೆಗೆ ಹಳಿ ದಾಟುತ್ತಿದ್ದ ಆನೆಗಳಿಗೆ ಡಿಕ್ಕಿ ಹೊಡೆದಿದೆ. ಗುವಾಹತಿಯಲ್ಲಿ 126 ಕಿ.ಮೀ. ದೂರದಲ್ಲಿ ಸಂಭವಿಸಿದೆ.


