ಪ್ರೀತಿಸಿ ಮದುವೆಯಾಗಿದ್ದ ಮಗಳು 6 ತಿಂಗಳ ಗರ್ಭಿಣಿ ಆಗಿದ್ದ ಮಗಳನ್ನೇ ತಂದೆ ಕೊಲೆಗೈದ ಭೀಕರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
7 ತಿಂಗಳ ಪ್ರೀತಿಸಿ ಮದುವೆ ಆಗಿದ್ದ ಮಾನ್ಯ ಪಾಟೀಲ್ ಮತ್ತು ವಿವೇಕಾನಂದ್ ದೊಡ್ಡಮನಿ ಮೇಲೆ ಮಗಳ ತಂದೆ ಪ್ರಕಾಶ್ ಗೌಡ ಪಾಟೀಲ್, ಮಾವ ವೀರನಗೌಡ ಪಾಟೀಲ್ ಮತ್ತು ಸೋದರ ಅರುಣ್ ಗೌಡ ತಲ್ವಾರ್‌ನಿಂದ ದಾಳಿ ನಡೆಸಿ ಮಗಳನ್ನು ಕೊಂದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವೇಕಾನಂದ ದೊಡ್ಡಮನಿ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಮಾನ್ಯ ಪಾಟೀಲ್ ಕುಟುಂಬಸ್ಥರು ಮದುವೆಯನ್ನು ವಿರೋಧಿಸಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿ ಎರಡು ಕುಟುಂಬಗಳ ನಡುವೆ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದರು.
ರಿಜಿಸ್ಟರ್ ಮದುವೆಯಾದ ಬಳಿಕ ಮಾನ್ಯ ಮತ್ತು ವಿವೇಕಾನಂದ್ ಜೀವಭಯದ ಕಾರಣ ಮನೆ ಬಿಟ್ಟು ಹಾವೇರಿಯಲ್ಲಿ ತಂಗಿದ್ದ ನವದಂಪತಿ ಡಿಸೆಂಬರ್ 8ರಂದು ಪರಿಸ್ಥಿತಿ ತಿಳಿಯಾಗಿದೆ ಎಂದು ಗ್ರಾಮಕ್ಕೆ ಮರಳಿದ್ದರು.
ಮಾನ್ಯಳ ತಂದೆ ಪ್ರಕಾಶ್ ಗೌಡ ಪಾಟೀಲ್, ಮಾವ ವೀರನಗೌಡ ಪಾಟೀಲ್ ಮತ್ತು ಸೋದರ ಅರುಣ್ ಗೌಡ ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ.
ಇದಕ್ಕೂ ಮೊದಲು ಮಾನ್ಯಳ ಕುಟುಂಬದವರು ವಿವೇಕಾನಂದ್ ತಂದೆ ಸುಭಾಷ್ ದೊಡ್ಡಮನಿ ಅವರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ಹತ್ಯೆಗೆ ಯತ್ನಿಸಿ ತಂದೆಗೆ ಅಪಘಾತವಾಗಿದೆ ಎಂದು ವಿವೇಕಾನಂದ್‌ಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಲೇ ವಿವೇಕಾನಂದ್ ಮನೆಯಿಂದ ಹೊರಗೆ ಹೋಗಿದ್ದಾನೆ. ಅತ್ತೆ ರೇಣವ್ವಾ ಜೊತೆ ಮಾನ್ಯ ಮನೆಯಲ್ಲಿದ್ದಳು. ಮನೆಯಲ್ಲಿ ಇಬ್ಬರೇ ಇದ್ದಾಗ ಪಾಟೀಲ್ ಕುಟುಂಬಸ್ಥರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಾನ್ಯ ಅಸು ನೀಗಿದರೆ ಅತ್ತೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮಾನ್ಯ ಪಾಟೀಲ್ ತಂದೆ ಪ್ರಕಾಶಗೌಡ ಪಾಟೀಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಲೆ ಬೀಸಿದ್ದಾರೆ.


