Wednesday, December 24, 2025
Google search engine
Homeಮನರಂಜನೆ10,500 ಪೈರಸಿ ಲಿಂಕ್ ಡಿಲಿಟ್: ಡೆವಿಲ್ ಚಿತ್ರದ ಗಳಿಕೆ ದಿಢೀರ್ ಏರಿಕೆ!

10,500 ಪೈರಸಿ ಲಿಂಕ್ ಡಿಲಿಟ್: ಡೆವಿಲ್ ಚಿತ್ರದ ಗಳಿಕೆ ದಿಢೀರ್ ಏರಿಕೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಭರ್ಜರಿ ಆರಂಭದ ನಂತರ ಕುಸಿತ ಕಂಡಿತ್ತು. ಆದರೆ ಇದೀಗ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ದಿಢೀರನೆ ಗಳಿಕೆಯಲ್ಲಿ ಭಾರೀ ಏರಿಕೆ ದಾಖಲಿಸಿ ಅಚ್ಚರಿ ಮೂಡಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರಮೋಷನ್ ವೇಳೆ ಯುದ್ಧಕ್ಕೆ ಹೊರಗಡೆ ದೊಡ್ಡ ಪಡೆಯೇ ಸಿದ್ಧವಾಗಿದೆ. ನಾವು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕಿಚ್ಚ ಸುದೀಪ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಾರ್ ಆರಂಭವಾಗಿದ್ದು, ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಲ್ಲ, ಪೈರಸಿ ವಿರುದ್ಧ ಎಂಬ ಸಮಜಾಯಿಷಿ ನಡುವೆ ಡೆವಿಲ್ ಚಿತ್ರ ತಂಡ 10500 ಪೈರಸ್ ಲಿಂಕ್ ಡಿಲಿಟ್ ಮಾಡಿದ್ದಾಗಿ ಘೋಷಿಸಿಕೊಂಡಿದೆ.

ಡೆವಿಲ್ ಚಿತ್ರ ತಂಡ 10,500ಕ್ಕೂ ಅಧಿಕ ಪೈರಸಿ ಲಿಂಕ್ ಡಿಲಿಟ್ ಮಾಡಿದ ಬೆನ್ನಲ್ಲೇ ಸತತ ಕುಸಿತ ಕಾಣುತ್ತಿದ್ದ ಗಳಿಕೆ ದಿಢೀರನೆ ಏರಿಕೆ ಕಂಡಿದ್ದು, ಭಾನುವಾರ ಒಂದೇ ದಿನ 1 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ಅಚ್ಚರಿ ಮೂಡಿಸಿದೆ.

ಪೈರಸಿ ಇಂದು ವೈರಸ್‌ನಂತೆ ಹಬ್ಬುತ್ತಿದೆ. ಈವರೆಗೂ 10,500 ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನ ಡಿಲೀಟ್‌ ಮಾಡುವ ಕೆಲಸ ಆಗಿದೆ. ದಯವಿಟ್ಟು ಯಾರೂ ಪೈರಸಿ ಮಾಡಬೇಡಿ, ಸಿನಿಮಾವನ್ನ ಥಿಯೇಟರ್‌ನಲ್ಲೇ ನೋಡಿ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟಿಗೆ ಪೈರಸಿ ಎದುರಾಗಿಲ್ಲ ಎಂದು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದೆ.

ಡೆವಿಲ್ ನಿರೀಕ್ಷೆ ಮಾಡಿದಂತೆ ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಂಡಿತ್ತು. ಮೊದಲ 4 ದಿನಗಳು ಸಿನಿಮಾದ ಕಲೆಕ್ಷನ್ ಕೋಟಿಗಳ ಲೆಕ್ಕದಲ್ಲಿಯೇ ಬಾಚಿಕೊಂಡಿತ್ತು. ಆದ್ರೆ 5ನೇ ದಿನದಿಂದ ‘ಡೆವಿಲ್’ ಬಾಕ್ಸಾಫೀಸ್‌ ಕಲೆಕ್ಷನ್‌ ಕುಸಿದಿತ್ತು. ಆದ್ರೆ ಮತ್ತೆ ಧೂಳೆಸುತ್ತಿರುವ ‌ʻಡೆವಿಲ್ʼ ಕಲೆಕ್ಷನ್‌ನಲ್ಲೂ ಸುಧಾರಿಸಿಕೊಳ್ಳುತ್ತಿದೆ.

ಡೆವಿಲ್’ ಸಿನಿಮಾ 11ನೇ ದಿನ ಬಾಕ್ಸಾಫೀಸ್‌ನಲ್ಲಿ ದಿಢೀರ್ ಏರಿಕೆ ಕಂಡಿದೆ. 7ನೇ ದಿನದಿಂದ ಬಾಕ್ಸಾಫೀಸ್ ಕಲೆಕ್ಷನ್ ಲಕ್ಷಗಳಿಗೆ ಕುಸಿದಿತ್ತು. ಈಗ ಮತ್ತೆ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 11ನೇ 1.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 10ನೇ ದಿನ 71 ಲಕ್ಷ ರೂ. ಕಲೆಕ್ಷನ್ ಮಾಡಿತ್ತು. ಇದು ಚಿತ್ರತಂಡ ಕೊಂಚ ಮಟ್ಟಿಗೆ ರಿಲೀಫ್ ಕೊಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments