ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪೊಲೀಸರು ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬಂಧಿಸಿದ್ದಾರೆ.
ಪವಿತ್ರಾ ಗೌಡ ಅಶ್ಲೀಲ ಫೋಟೊ ಹಾಗೂ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಎಂಬುವವರನ್ನು ಮೈಸೂರಿಗೆ ಕರೆಸಿಕೊಂಡು ಹತ್ಯೆ ಮಾಡಿ ಬೆಂಗಳೂರಿನ ಕಮಾಕ್ಷಿಪಾಳ್ಯದ ರಸ್ತೆ ಬದಿಯ ಚರಂಡಿಯಲ್ಲಿ ಬಿಸಡಲಾಗಿತ್ತು. ದರ್ಶನ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.
ದರ್ಶನ್ ಅವರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದು, ಅಜ್ಞಾತಸ್ಥಳದಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಚಿತ್ರದುರ್ಗದಲ್ಲಿ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿ ಶನಿವಾರ ಮನೆಯಿಂದ ಹೊರಟವನು ವಾಪಸ್ ಬಂದಿಲ್ಲ. ಬೆಂಗಳೂರಿನಲ್ಲಿ ಇದ್ದಾನೆ ಎಂದು ಕುಟುಂಬಸ್ಥರಿಗೆ ಮಾಹಿತಿ ಬಂದಿತ್ತು ಎಂದು ತಿಳಿದು ಬಂದಿದೆ.
ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನಿಗೆ ಕರೆ ಮಾಡಿರುವ ದರ್ಶನ್ ಕರೆ ಮಾಡಿ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಜೂನ್ 8ರಂದು ವಿನಯ್ ಎಂಬುವವರಿಗೆ ಸೇರಿದ ಶೆಡ್ ನಲ್ಲಿ ಇರಿಸಲಾಗಿತ್ತು.
ರೇಣುಕಾಸ್ವಾಮಿಯನ್ನು ಬಲವಾದ ಆಯುಧದಿಂದ ಹೊಡೆದು ಹತ್ಯೆಗೈದು ಚರಂಡಿಗೆ ಬಿಸಡಲಾಗಿದ್ದು, ಜೂನ್ 9ರಂದು ನಾಯಿಗಳು ದೇಹವನ್ನು ಎಳೆದಾಡುತ್ತಿದ್ದರಿಂದ ಶವ ಪತ್ತೆಯಾಗಿತ್ತು. ಆತ್ಮಹತ್ಯೆ ಪ್ರಕರಣ ಎಂದು ತನಿಖೆ ಆರಂಭಿಸಿದ ಪೊಲೀಸರಿಗೆ ಗಿರಿನಗರ ಮೂವರು ಪೊಲೀಸರಿಗೆ ಶರಣಾಗಿ ಹಣಕಾಸಿನ ವಿಷಯದಲ್ಲಿ ಕೊಲೆ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಆಘಾತ ಮೂಡಿದ್ದು, ಅಶ್ಲೀಲ ಪೋಸ್ಟ್ ಮತ್ತು ಕಮೆಂಟ್ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಕರೆಸಿಕೊಂಡ ದರ್ಶನ್ ಸಹಾಯಕರಿಂದ ಕೊಲೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.