Wednesday, December 24, 2025
Google search engine
Homeಅಪರಾಧಬೆಂಗಳೂರಿನಲ್ಲಿ ವಾರಪೂರ್ತಿ ಪ್ರೊಫೆಸರ್, ವೀಕೆಂಡ್ ಕಳ್ಳಿ ಅರೆಸ್ಟ್

ಬೆಂಗಳೂರಿನಲ್ಲಿ ವಾರಪೂರ್ತಿ ಪ್ರೊಫೆಸರ್, ವೀಕೆಂಡ್ ಕಳ್ಳಿ ಅರೆಸ್ಟ್

ಬೆಂಗಳೂರು: ವಾರಪೂರ್ತಿ ಫ್ರೊಫೆಸರ್ ಆಗಿ ಪಾಠ ಮಾಡುವ ಮಹಿಳೆ ವೀಕೆಂಡ್ ಗಳಲ್ಲಿ ಮದುವೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಕಿ ಕಳ್ಳಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಬೆಂಗಳೂರಿನ ಕೆಆರ್ ಪುರಂನಲ್ಲಿ ನಿವಾಸಿ ಆಗಿರುವ ಶಿವಮೊಗ್ಗ ಮೂಲದ ರೇವತಿ ಬಂಧಿತ ಆರೋಪಿಯಾಗಿದ್ದು, ಈಕೆ ಖಾಸಗಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೀಕೆಂಡ್ ಗಳಲ್ಲಿ ಕಲ್ಯಾಣ ಮಂಟಪ ಪ್ರವೇಶಿಸಿ ಮದುವೆ ಮನೆಯಲ್ಲಿ  ಚೆನ್ನಾಗಿ ತಿಂದು, ಚಿನ್ನಾಭರಣ  ದೋಚಿ ಹೋಗುತ್ತಿದ್ದ ಪ್ರೊಫೆಸರ್‌ ರೇವತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಂದೂರು ಬಳಿಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಫ್ರೊಫೆಸರ್ ಆಗಿರುವ ಆರೋಪಿ ವಾರಪೂರ್ತಿ ಪಾಠ ಮಾಡುತ್ತಿದ್ದಳು. ಆದರೆ ಭಾನುವಾರ ಮಾತ್ರ ಸಂಬಂಧಿಕರ ರೀತಿಯಲ್ಲಿ ಮದುವೆ ಕಲ್ಯಾಣ ಮಂಟಪ ಪ್ರವೇಶಿಸುತ್ತಿದ್ದಳು.

ಅನುಮಾನ ಬಾರದಂತೆ ಎಲ್ಲರನ್ನೂ ಮಾತಾಡಿಸುತ್ತಿದ್ದ ಈಕೆ ಚಿನ್ನಾಭರಣವನ್ನು ಕದಿಯುತ್ತಿದ್ದಳು. ನಂತರ ಮದುವೆ ಊಟ ಮಾಡಿಕೊಂಡು ಪರಾರಿಯಾಗುತ್ತಿದ್ದಳು.

ಕಳೆದ ನವೆಂಬರ್ 25 ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ಈಕೆ ಸಂಬಂಧಿಕರ ರೀತಿ ತೆರಳಿ ಮದುವೆ ಮನೆಯವರ ಚಿನ್ನಾಭರಣ ಕದ್ದಿದ್ದಳು.

ಭಾನುವಾರದ ದಿನ ಬೆಂಗಳೂರನ್ನು ರೌಂಡ್ಸ್ ಹಾಕುತ್ತಿದ್ದ ಈಗೆ ಮದುವೆ ಇರುವ ಹಾಲ್‌ಗಳಿಗೆ ಪ್ರವೇಶ ಮಾಡುತ್ತಿದ್ದಳು. ಬಸವನಗುಡಿ ಪೊಲೀಸರ ವಿಚಾರಣೆ ವೇಳೆ ಮೂರು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತಳಿಂದ 32 ಲಕ್ಷ ರೂ. ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ.

ಬೇರೆ ಬೇರೆ ಕಲ್ಯಾಣಮಂಟಪದಲ್ಲಿ ಇದೇ ರೀತಿ ಈಕೆ ಕೃತ್ಯ ಎಸಗಿರುವ ಸಾಧ್ಯತೆ ಇದ್ದು ಪೊಲೀಸರು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments