Thursday, November 21, 2024
Google search engine
Homeಅಪರಾಧಹೆಲ್ಮೆಟ್ ನಿಂದ ಹೊಡೆದ ಮಗನನ್ನೇ ಇರಿದು ಕೊಂದ ತಂದೆ!

ಹೆಲ್ಮೆಟ್ ನಿಂದ ಹೊಡೆದ ಮಗನನ್ನೇ ಇರಿದು ಕೊಂದ ತಂದೆ!

ದ್ವಿಚಕ್ರ ವಾಹನ ಎಲ್ಲೋ ಬಿಟ್ಟು ಮನೆಗೆ ಬಂದಿದ್ದ ವಿಚಾರಕ್ಕೆ ನಡೆದ ಜಗಳದಲ್ಲಿ ಮಗ ಹೆಲ್ಮೆಟ್ ನಿಂದ ಹೊಡೆದಿದ್ದರಿಂದ ಸಿಟ್ಟಿಗೆದ್ದ ಅಪ್ಪ ಚಾಕುವಿನಿಂದ ಇರಿದು ಮಗನನ್ನೇ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರದ ಮುದ್ದನಪಾಳ್ಯದ ನಿವಾಸಿ ಅಂಜನ್ ಕುಮಾರ್ (27) ಕೊಲೆಯಾಗಿದ್ದು, ಅಪ್ಪ ವೆಂಕಟೇಶ್ (57) ನನ್ನು ಬಂಧಿಸಲಾಗಿದೆ.

ರಿಯಲ್ ಎಸ್ಟೇಟ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದ ವೆಂಕಟೇಶ್ ತನ್ನ ಕುಟುಂಬದ ಜೊತೆಗೆ ಮುದ್ದನಪಾಳ್ಯದಲ್ಲಿ ನೆಲೆಸಿದ್ದು, ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಂಜನ್‌ ಪಿಯುಸಿ ಮೊಟಕುಗೊಳಿಸಿ ಮನೆಯಲ್ಲಿ ಇದ್ದ.

ಭಾನುವಾರ ಸಂಜೆ ವೆಂಕಟೇಶ್‌ ಮಗಳ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಗೆ ಹೋಗಿದ್ದರು. ಆದರೆ ರಾತ್ರಿ ದ್ವಿಚಕ್ರ ವಾಹನದ ಜೊತೆ ಮನೆಗೆ ಬಂದಿರಲಿಲ್ಲ,

ಬೈಕ್ ವಿಚಾರವಾಗಿ ಅಂಜನ್ ಕುಮಾರ್, ತಂದೆ ವೆಂಕಟೇಶ್‌ ಅವರನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ವೆಂಕಟೇಶ್‌ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾನೆ. ಈ ವಿಚಾರದ ಬಗ್ಗೆ ಮಾತಿಗೆ ಮಾತು ಬೆಳೆದು ಅಂಜನ್‌ ಹೆಲ್ಮೆಟ್‌ನಿಂದ ತಂದೆಗೆ ಹೊಡೆದಿದ್ದಾನೆ.

ತನ್ನ ಮೇಲೆಗೆ ಮಗ ಹೊಡೆದಿದ್ದಕ್ಕೆ ಸಿಟ್ಟಾದ ತಂದೆ ವೆಂಕಟೇಶ್‌ ಅಡುಗೆ ಮನೆಗೆ ತೆರಳಿ ಚಾಕು ತಂದು ಅಂಜ್‌ನ ಎಡಭಾಗದ ಎದೆಗೆ ಇರಿದಿದ್ದಾನೆ. ವಿಪರೀತ ರಕ್ತಸ್ರಾವದಿಂದಾಗಿ ಅಂಜನ್‌ ಅಲ್ಲೇ ಕುಸಿದು ಬಿದ್ದಿದ್ದಾನೆ.

ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments