Friday, November 22, 2024
Google search engine
Homeಬೆಂಗಳೂರುಭಾರತದಲ್ಲಿ 75 ವರ್ಷ ಪೂರೈಸಿದ್ದಕ್ಕಾಗಿ 75 ಸಾವಿರ ಗಿಡ ನೆಡಲಿರುವ ಹಿಟಾಚಿ ಎನರ್ಜಿ!

ಭಾರತದಲ್ಲಿ 75 ವರ್ಷ ಪೂರೈಸಿದ್ದಕ್ಕಾಗಿ 75 ಸಾವಿರ ಗಿಡ ನೆಡಲಿರುವ ಹಿಟಾಚಿ ಎನರ್ಜಿ!

ಭಾರತದಲ್ಲಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಿಟಾಚಿ ಎನರ್ಜಿ ಪರಿಸರ ದಿನಾಚರಣೆ ದಿನದಂದು 75 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಂಪನಿಯು ಸುಸ್ಥಿರ ಮತ್ತು ಹಸಿರು ಭವಿಷ್ಯವನ್ನು ಉತ್ತೇಜಿಸಲು ಮರ ನೆಡುವ ಅಭಿಯಾನ ಪ್ರಾರಂಭಿಸುತ್ತಿದೆ. ಈ 12 ತಿಂಗಳುಗಳಲ್ಲಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಛೇರಿ ಆವರಣಗಳು ಮತ್ತು ಸಮುದಾಯದ ಸ್ಥಳಗಳಲ್ಲಿ 75,000 ಸಸಿಗಳನ್ನು ನೆಡಲಾಗುವುದು. ಈ ಯೋಜನೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು, ಪಾಲುದಾರ ಸಂಸ್ಥೆಗಳು ಮತ್ತು ನಮ್ಮ ಉದ್ಯೋಗಿಗಳು ಭಾಗವಹಿಸಲಿದ್ದಾರೆ; ನಾವೆಲ್ಲರೂ ಕೂಡಿ ಸಾರ್ವಜನಿಕ ಸಮುದಾಯ ಸ್ಥಳಗಳು ಮತ್ತು ಖಾಸಗಿ ಆಸ್ತಿಗಳನ್ನು ಹಸಿರಾಗಿಸಲು ಪ್ರಯತ್ನಿಸುತ್ತೇವೆ.

ಈ ಇಡೀ ಉಪಕ್ರಮದಲ್ಲಿ ಎರಡು ಹಂತಗಳಿರುತ್ತವೆ: ಮೊದಲ ಹಂತದಲ್ಲಿ ಕಂಪನಿಯು 45,000 ಮತ್ತು ಎರಡನೇ ಹಂತದಲ್ಲಿ ಉಳಿದ 30,000 ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದೆ.

ಈ ಉಪಕ್ರಮವು ಹಿಟಾಚಿ ಎನರ್ಜಿಯ ಸುಸ್ಥಿರ ಮತ್ತು ಪರಿಸರ ಕಾಳಜಿಯ ಬಗ್ಗೆ ಒತ್ತಿಹೇಳುತ್ತದೆ. ಈ ಯೋಜನೆಯಲ್ಲಿ ಸ್ಥಳೀಯ ಸಮುದಾಯಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದರ ಉದ್ದೇಶ, ತ್ವರಿತ ಅನುಷ್ಠಾನ. ಜೊತೆಗೆ, ಮಕ್ಕಳಿಗೆ ಸುಸ್ಥಿರ ಪರಿಸರದ ಮಹತ್ವವನ್ನು ತಿಳಿಸುತ್ತದೆ ಮತ್ತು ನಮ್ಮ ಗ್ರಹವನ್ನು ರಕ್ಷಿಸುವಲ್ಲಿ ಸಕ್ರಿಯ ಪಾತ್ರಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ.

75,000 ಸಸಿಗಳನ್ನು ನೆಡುವುದು ಕೇವಲ ಸಾಂಕೇತಿಕ ಸೂಚಕವಲ್ಲ ಆದರೆ ಹಸಿರು ಭವಿಷ್ಯದತ್ತ ಒಂದು ಸ್ಪಷ್ಟವಾದ ಹೆಜ್ಜೆ. ಹಿಟಾಚಿ ಎನರ್ಜಿಯ ಸಹಕಾರಿ ಪ್ರಯತ್ನಗಳು ಇಂದಿನ ಹಾಳಾದ ವಾತಾವರಣವನ್ನು ಸರಿಪಡಿಸುವಲ್ಲಿ ಗಣನೀಯವಾದ ಪಾತ್ರವನ್ನು ವಹಿಸುತ್ತವೆ. ಏಕೆಂದರೆ ಇಂದು ಈ ಸವಾಲಿನ ಅಗಾಧತೆ, ಒಬ್ಬ ವ್ಯಕ್ತಿ, ಒಂದು ಕಂಪನಿ ಅಥವಾ ಒಂದು ರಾಷ್ಟ್ರಕ್ಕೆ ನಿಲುಕುವುದಲ್ಲ.

ಹಿಟಾಚಿ ಎನರ್ಜಿಯ ಪರಿಸರ ಕಾಳಜಿ ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳಬೇಕೆಂಬ ಒಂದು ವಿಶಾಲ ಧ್ಯೇಯದ ಭಾಗವಾಗಿದೆ. ಮರಗಳನ್ನು ನೆಡುವುದರ ಜೊತೆಗೆ, ಹಿಟಾಚಿ ಎನರ್ಜಿಯ ಸ್ವಯಂಸೇವಕರ ತಂಡ: “ಸುಸ್ಥಿರತೆ ಮತ್ತು ಎನರ್ಜಿ ಸ್ಥಿತ್ಯಂತರ” (“Sustainability & Energy Transition”) ಕುರಿತು ತರಬೇತಿ ನಡೆಸಲು ಮತ್ತು STEM ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು 75 ಶಾಲೆಗಳಿಗೆ ಭೇಟಿ ನೀಡುತ್ತದೆ. ಕಂಪನಿಯು ಸಮುದಾಯಗಳಿಗೆ 75,000 ಯೂನಿಟ್‌ಗಳ ಹಸಿರು ಶಕ್ತಿಯನ್ನು (ಸೌರಶಕ್ತಿ) ಒದಗಿಸುವ ಗುರಿಯನ್ನು ಹೊಂದಿದೆ. ಇದು ಸುಸ್ಥಿರ ಮತ್ತು ಹಸಿರು ಭವಿಷ್ಯಕ್ಕಾಗಿ ನಮಗಿರುವ ಬದ್ಧತೆಯನ್ನು ತೋರುತ್ತದೆ.

ಪ್ರಸ್ತುತ ಮೂರು ರಾಜ್ಯಗಳಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ – ಕರ್ನಾಟಕ, ತಮಿಳುನಾಡು, ಮತ್ತು ಗುಜರಾತ್. ಇತರ ಭೌಗೋಳಿಕ ಪ್ರದೇಶಗಳಿಗೂ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments