18ನೇ ಲೋಕಸಭಾ ಅಧಿವೇಶನ ಜೂನ್ 24ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಜೂನ್ 24ರಿಂದ ಜುಲೈ 3ರವರೆಗೆ 9 ದಿನಗಳ ಕಾಲ ನಡೆಯಲಿರುವ ಲೋಕಸಭಾ ಅಧಿವೇಶನದ ವೇಳೆ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ನಂತರ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಚಿವರು ವಿವರಿಸಿದರು.
ಇದೇ ವೇಳೆ 264ನೇ ಅವಧಿಯ ರಾಜ್ಯಸಭಾ ಕಲಾಪ ಕೂಡ ಜೂನ್ 24ರಿಂದ 9 ದಿನಗಳ ಕಾಲ ನಡೆಯಲಿದೆ ಎಂದು ಅವರು ಹೇಳಿದರು.
ಜೂನ್ 27ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮರ್ಮು ಭಾಷಣ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಮುಂದಿನ 5 ವರ್ಷಗಳ ಆಡಳಿತದ ದೂರದೃಷ್ಟಿಯನ್ನು ಮುಂದಿಡಲಿದ್ದಾರೆ ಎಂದು ಹೇಳಲಾಗಿದೆ.