ಮನೆಯ ರೆಫ್ರಿಜರೇಟರ್ ಗಳಲ್ಲಿ ಗೋಮಾಂಸ ಪತ್ತೆಯಾಗಿದ್ದರಿಂದ ಸ್ಥಳೀಯ ಆಡಳಿತ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ 11 ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಮಧ್ಯಪ್ರದೇಶದ ಮಾಡ್ಲದಲ್ಲಿ ಆದಿವಾಸಿ ಜನಾಂಗಗಳೇ ಹೆಚ್ಚಾಗಿ ವಾಸಿಸುತ್ತಿದ್ದು, ಇಲ್ಲಿ ಗೋಮಾಂಸಕ್ಕೆ ಅಪಾರ ಬೇಡಿಕೆ ಇದೆ. ಆದರೆ ಸರ್ಕಾರ ಗೋಮಾಂಸ ಅಕ್ರಮ ಮಾರಾಟವನ್ನು ನಿಷೇದಿಸಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ 11 ಮನೆಗಳ ರೆಫ್ರಿಜರೇಟರ್ ನಲ್ಲಿ ಗೋಮಾಂಸ ಶೇಖರಿಸಿದ್ದು ಕಂಡು ಬಂದಿತ್ತು. ಅಲ್ಲದೇ ಮನೆಯ ಹಿಂದೆ 150ಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗಿತ್ತು. ಗೋವಿನ ಮಾಂಸ, ಮೂಳೆಗಳು ಕೂಡ ಪತ್ತೆಯಾಗಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.