72 ವರ್ಷದ ಮುದುಕ 12 ವರ್ಷದ ಬಾಲಕಿ ಜೊತೆ ಮದುವೆಯನ್ನು ಪಾಕಿಸ್ತಾನದ ಪೊಲೀಸರು ವಿಫಲಗೊಳಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಚಾರ್ಸಡ್ಡಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿಖಾಹ್ ಆಗಲು ಯತ್ನಿಸಿದ 72 ವರ್ಷದ ಹಕೀಬ್ ಖಾನ್ ಹಾಗೂ `ನಿಖಾಹ್ ಖ್ವಾನ್’ (ಮದುವೆ ಮಾಡಿಸುತ್ತಿದ್ದ) ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯ ತಂದೆ ಪರಾರಿಯಾಗಿದ್ದಾನೆ.
ಬಾಲಕಿಯ ತಂದೆ ಅಲಮ್ ಸೈಯದ್ 5 ಲಕ್ಷ ರೂ.ಗೆ ಮಗಳನ್ನು 72 ವರ್ಷದ ಮುದುಕನಿಗೆ ಮಾರಾಟ ಮಾಡಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲಮ್ ಸೈಯದ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಪಾಕಿಸ್ತಾನದಲ್ಲಿ ಬಾಲ್ಯ ವಿವಾಹ ನಿಷೇಧಿಸಿ ಕಾಯ್ದೆಗಳು ಇದ್ದರೂ ನಿರಂತರವಾಗಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಇತ್ತೀಚೆಗೆ 12 ವರ್ಷದ ಬಾಲಕಿಯನ್ನು 70 ವರ್ಷದ ವೃದ್ಧ ಮದುವೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೆ, ಪಂಜಾಬ್ ನ ರಾಜನ್ ಪುರದಲ್ಲಿ 11 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು.