ಮಕ್ಕಳು-ಮರಿಗಳನ್ನು ಹೆದರಿಸುತ್ತಾ ಸ್ಥಳೀಯ ನಾಯಿಗಳನ್ನು ತಿಂದು ತೇಗುತ್ತಿದ್ದ ಬೃಹತ್ ಗಾತ್ರದ ಮೊಸಳೆಯನ್ನೇ ಊರಿನ ಜನ ಕೊಂದು ತಿಂದ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಪ್ರವಾಹದಿಂದ ಬೈನೆಸ್ ನದಿಯಲ್ಲಿ ಕಂಡು ಬಂದಿದ್ದ 3.63 ಮೀಟರ್ ಉದ್ದದ ಮೊಸಳೆಯನ್ನು ಊರ ಹಬ್ಬದ ದಿನ ಜನರು ತಿಂದಿದ್ದಾರೆ.
ನದಿ ಸಮೀಪ ಹೋಗುತ್ತಿದ್ದ ಸ್ಥಳೀಯರಿಗೆ ಭೀತಿ ಹುಟ್ಟಿಸಿದ್ದ ಮೊಸಳೆಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ನಂತರ ಮಕ್ಕಳು, ದೊಡ್ಡವರ ಎಲ್ಲಾ ಮೊಸಳೆ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ನಂತರ ಊರಿನ ಜನಕ್ಕೆ ಹಸ್ತಾಂತರ ಮಾಡಲಾಗಿದೆ.
ಸತ್ತಿರುವ ಮೊಸಳೆಯನ್ನು ಪಡೆದ ಊರಿನ ಜನ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಹಬ್ಬದ ವೇಳೆ ಮೊಸಳೆ ಬಾಲದಿಂದ ಸೂಪ್ ತಯಾರಿಸಿದರೆ, ಮಾಂಸವನ್ನು ಬಾಳೆ ಎಲೆಯಲ್ಲಿ ಸುತ್ತಿ ಸುಟ್ಟು ಮಣ್ಣಿನಲ್ಲಿ ಮುಚ್ಚಿ ಅಡುಗೆ ಮಾಡಿದ್ದಾರೆ. ನಂತರ ಹಂಚಿಕೊಂಡು ಎಲ್ಲರೂ ಸೇವಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಘಟನೆಯನ್ನು ವಿವರಿಸಿದ್ದಾರೆ.