Sunday, February 22, 2026
Google search engine
Homeಕಾನೂನು2 ಲಕ್ಷ ಮಕ್ಕಳ ಅಶ್ಲೀಲ ವೀಡಿಯೋ ಮಾಡಿದ್ದ ದಂಪತಿಗೆ ಮರಣದಂಡನೆ: ಸಂತ್ರಸ್ತರಿಗೆ 10 ಲಕ್ಷ ರೂ....

2 ಲಕ್ಷ ಮಕ್ಕಳ ಅಶ್ಲೀಲ ವೀಡಿಯೋ ಮಾಡಿದ್ದ ದಂಪತಿಗೆ ಮರಣದಂಡನೆ: ಸಂತ್ರಸ್ತರಿಗೆ 10 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್ ಸೂಚನೆ

ಬಂದಾ (ಉತ್ತರ ಪ್ರದೇಶ): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ್ದೂ ಅಲ್ಲದೇ ವೀಡಿಯೋ ಮಾಡಿ ಮಾರಾಟ ಮಾಡಿದ್ದ ದಂಪತಿಗೆ ಉತ್ತರ ಪ್ರದೇಶದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಸಂತ್ರಸ್ತರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಘೋಷಿಸಿದೆ.

ಇದೊಂದು “ಅಪರೂಪದಲ್ಲಿ ಅಪರೂಪದ” ಹಾಗೂ ಅತ್ಯಂತ ದಾರುಣ ಪ್ರಕರಣ ವಿಶ್ಲೇಷಿಸಿರುವ ಕೋರ್ಟ್​, ಸರ್ಕಾರಿ ಜೂನಿಯರ್ ಎಂಜಿನಿಯರ್ (ಜೆಇ) ಆಗಿ ಕೆಲಸ ಮಾಡುತ್ತಿದ್ದ ರಾಮ್ ಭವನ್ ಮತ್ತು ಆತನ ಪತ್ನಿ ದುರ್ಗಾವತಿಗೆ 33 ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಅಪರಾಧಿಗಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿದೆ.

ವಿವಿಧ ಜಿಲ್ಲೆಗಳ ಮಕ್ಕಳ ಮೇಲೆ ಕೃತ್ಯ ಎಸಗಲಾಗಿದೆ. ಇದು ಅಪರಾಧಿಗಳ ನೈತಿಕ ಅಧಃಪತನವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಇದೊಂದು ‘ಅಸಾಧಾರಣ ಮತ್ತು ಘೋರ ಸ್ವಭಾವದ ಅಪರಾಧ’ ಎಂದು ಶಿಕ್ಷೆ ಪ್ರಕಟಿಸುವಾಗ ನ್ಯಾಯಾಧೀಶರು ಹೇಳಿದರು.

ಪ್ರಕರಣದ ವಿವರ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅಶ್ಲೀಲ ಉದ್ದೇಶಗಳಿಗಾಗಿ ಮಕ್ಕಳ ಬಳಕೆ ಮತ್ತು ಅಂತರ್ಜಾಲದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಂಟೆಂಟ್ ಹಾಕಿದ್ದಲ್ಲದೆ, ಪ್ರಸಾರ ಮಾಡಿದ ಆರೋಪಗಳ ಮೇಲೆ ಸಿಬಿಐ 2020ರ ಅಕ್ಟೋಬರ್ 31ರಂದು ರಾಮ್ ಭವನ್ ದಂಪತಿ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆ ಪೂರ್ಣಗೊಳಿಸಿ 2021ರ ಫೆಬ್ರವರಿ 10ರಂದು ದಂಪತಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಮೇ 26, 2023ರಂದು ಆರೋಪ ಸಾಬೀತಾಗಿತ್ತು.

ಚಿತ್ರಕೂಟದ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದ ಭವನ್ ಮತ್ತು ದುರ್ಗಾವತಿ ಮೂರರಿಂದ 18 ವರ್ಷದೊಳಗಿನ 33 ಮಕ್ಕಳ ಲೈಂಗಿಕ ಶೋಷಣೆಯ ವಿಡಿಯೋಗಳನ್ನು ಸಿದ್ಧಪಡಿಸಿ, 47 ದೇಶಗಳಲ್ಲಿರುವ ವ್ಯಕ್ತಿಗಳಿಗೆ ಕಳುಹಿಸಿದ್ದಾರೆ ಎಂದು ಎಫ್​ಐಆರ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಸರ್ಕಾರಿ ವಕೀಲ ಸೌರಭ್ ಕುಮಾರ್ ಸಿಂಗ್ ಹೇಳಿದ್ದಾರೆ.

ದಂಪತಿ ಇಂತಹ 2 ಲಕ್ಷ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ. ಭವನ್ 10ರಿಂದ 12 ವರ್ಷಗಳಿಂದ ಅಪ್ರಾಪ್ತ ವಯಸ್ಕರ ಮೇಲೆ ದೌರ್ಜನ್ಯ ನಡೆಸಿ, ಕೃತ್ಯವನ್ನು ಚಿತ್ರೀಕರಿಸುತ್ತಿದ್ದ.

10 ಲಕ್ಷ ರೂ. ಪರಿಹಾರ

ಪ್ರತಿಯೊಬ್ಬ ಸಂತ್ರಸ್ತರಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ  ನಿರ್ದೇಶನ ನೀಡಿದೆ. ಆರೋಪಿಗಳ ಮನೆಯಿಂದ ವಶಪಡಿಸಿಕೊಂಡ 8 ಲಕ್ಷ ರೂ. ನಗದು ಹಣವನ್ನು ನೊಂದವರಿಗೆ ಸಮಾನ ಪ್ರಮಾಣದಲ್ಲಿ ಹಂಚಬೇಕೆಂದು ಕೋರ್ಟ್​ ಆದೇಶಿಸಿದೆ.

ದಂಪತಿ ಮಾಡಿದ ವಿಡಿಯೋಗಳ ಜೊತೆಗೆ, ವಿಚಾರಣೆ ಸಮಯದಲ್ಲಿ ಸಂತ್ರಸ್ತ ಮಕ್ಕಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅಪರಾಧಿಗಳು ಆನ್‌ಲೈನ್ ವಿಡಿಯೋ ಗೇಮ್‌ಗಳು, ಹಣ ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸುತ್ತಿದ್ದರು ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments