ಕಾರ್ಯಗಳಲ್ಲಿ ಜಯ, ಮಾನ್ಯತೆ, ಬಡ್ತಿಗಾಗಿ ಒಂದು ಓಡುವ ಕುದುರೆಯ ಚಿತ್ರವನ್ನು ದಕ್ಷಿಣ ದಿಕ್ಕಿನಲ್ಲಿ ಅಂಟಿಸಿ, ಐಶ್ವರ್ಯ ದೇವತೆ ನೆಲೆಸುತ್ತಾಳೆ. ಎರಡು ಬಾತುಕೋಳಿ ಚಿತ್ರ, ಲವ್ ಬರ್ಡ್ಸ್ ಚಿತ್ರಗಳನ್ನು ನೈರುತ್ಯ ದಿಕ್ಕಿನಲ್ಲಿ ಶಯನ ಕೋಣೆಯಲ್ಲಿಡಿ.
ಪತಿ-ಪತ್ನಿಯ ಸುಂದರ ಭಾವ ಚಿತ್ರವನ್ನು ಶಯನ ಕೋಣೆ ನೈರುತ್ಯ ದಿಕ್ಕಿನಲ್ಲಿಡಿ. ಮನೆಯ ಹಾಲ್ ನಲ್ಲಿ ಕಾಣುವಂತಿಡಿ. ದುಷ್ಟಶಕ್ತಿಗಳು ದೂರವಾಗಿ ಮನೆಯಲ್ಲಿ ಸಂತೋಷ, ಸಾಮರಸ್ಯವುಂಟಾಗುತ್ತದೆ.
ಅಕ್ವೇರಿಯಂ (ಮೀನಿ ತೊಟ್ಟಿ)ಯನ್ನು ಮನೆಯ ಹಾಲ್ ನಲ್ಲಿ ಉತ್ತರದ ಗೋಡೆ ಕಡೆ ಇಡಿ. ಎಂಟು ಕೆಂಪು ಅಥವಾ ಗೋಲ್ಡ್ ಫಿಶ್ (ಬಂಗಾರದ ಬಣ್ಣ) ಜೊತೆ ಒಂದು ಕಪ್ಪು ಮೀನು ಇಡಿ.
ನೀರಿನ ವಸ್ತುಗಳು (ಚಿಲುಮೆ, ಮೀನಿನ ತೊಟ್ಟಿ) ಉತ್ತರ ಕಡೆ ಇಟ್ಟರೆ ವ್ಯವಹಾರ, ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತೀರಿ. ನೀರಿನ ಚಿತ್ರಪಟಗಳನ್ನು ಉತ್ತರ ದಿಕ್ಕಿನ ಗೋಡೆಗೆ ಅಂಟಿಸಿ, ಆದರೆ ಭಯಂಕರ ಜಲಪಾತ, ನಿಂತ ನೀರು, ದೋಣಿ, ಹಡಗು ಇರುವ ಭಯಂಕರ ಅಲೆಗಳ ನೀರಿನ ಚಿತ್ರ ಬೇಡ.
ನಗುವ ಬುದ್ಧನನ್ನು ಬಾಗಿಲು ಎದುರು ಒಳಭಾಗದಲ್ಲಿಡಿ. (ಒಳಬರುವವರಿಗೆ ಕಾಣುವಂತೆ) ಮೂರು ಕಾಲಿನ ಕಪ್ಪೆಯ ಪ್ರತಿಕೃತಿಯನ್ನು ಬಾಯಿಯಲ್ಲಿ ನಾಣ್ಯವಿರುವ ಕಪ್ಪೆ ಬೊಂಬೆಯನ್ನು ಮನೆಯ ಒಳಭಾಗದಲ್ಲಿ, ಒಳಗೆ ಬರುತ್ತಿರುವಂತೆ ಮುಖ ಮಾಡಿ ಇಡಿ.
ಗಾಲಿಗಂಟೆ (ವಿಂಡ್ ಚೈಮ್ಸ್) ಅನ್ನು ಹಾಲ್ ನ ವಾಯುವ್ಯ ಮೂಲೆಯಲ್ಲಿ ಅಥವಾ ಮುಖ್ಯದ್ವಾರದ ಬಾಗಿಲ ಬಳಿ ಹಾಕಬಹುದು. ಇದರಿಂದ ಪ್ರತಿಧ್ವನಿಸುವ ಶಬ್ಧದ ಅಲೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಿ, ಸಂತೋಷ, ಉಲ್ಲಾಸ ಮನೆಯಲ್ಲಿ ನೆಲೆಸುತ್ತದೆ.
ಲೋಹದ ಆಮೆಯಿಂದ ಮಾಡಿದ ಪ್ರತಿಕೃತಿಯನ್ನು ಒಂದು ಸಣ್ಣ ಬಟ್ಟಲಿನಲ್ಲಿ ನೀರು ಹಾಕಿ, ಅದರಲ್ಲಿಡಿ. ಇದರಿಂದ ಆಯುಷ್ಯ ವೃದ್ಧಿಯಾಗುತ್ತದೆ. ಬಿದಿರಿನ ಗಿಡಗಳು ಮನೆ ಅಥವಾ ಆಫೀಸ್ ನ ಪ್ರವೇಶ ದ್ವಾರದ ಎದುರು ಇಡಿ. ಇದು ದೃಷ್ಟಿದೋಷಗಳು ಹೋಗಿ, ದೀರ್ಘಾಯುಷ್ಯ, ಆರೋಗ್ಯ ಅದೃಷ್ಟ ತರುತ್ತದೆ.