Sunday, May 31, 2026
Google search engine
Homeಕ್ರೀಡೆ155 ರನ್ ಗೆ ಗುಜರಾತ್ ಟೈಟಾನ್ಸ್ ಕಟ್ಟಿ ಹಾಕಿದ ಆರ್ ಸಿಬಿ ಬೌಲರ್ ಗಳು!

155 ರನ್ ಗೆ ಗುಜರಾತ್ ಟೈಟಾನ್ಸ್ ಕಟ್ಟಿ ಹಾಕಿದ ಆರ್ ಸಿಬಿ ಬೌಲರ್ ಗಳು!

ಅಹಮದಾಬಾದ್: ಶಿಸ್ತಿನ ದಾಳಿ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ಐಪಿಎಲ್ ಟಿ-20 ಟೂರ್ನಿಯ ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 155 ರನ್ ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.

ಭಾನುವಾರ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿಗೆ ಬೌಲರ್ ಗಳು ಉತ್ತಮ ಸಾಥ್ ನೀಡಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 155 ರನ್ ಗಳ ಸಾಧಾರಣ ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ತಂಡವನ್ನು ಕಟ್ಟಿ ಹಾಕಿದರು.

ಭಾನುವಾರ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿಗೆ ಬೌಲರ್ ಗಳು ಉತ್ತಮ ಸಾಥ್ ನೀಡಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 155 ರನ್ ಗಳ ಸಾಧಾರಣ ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ತಂಡವನ್ನು ಕಟ್ಟಿ ಹಾಕಿದರು.

ಆರ್ ಸಿಬಿ ತಂಡದ ಬೌಲಿಂಗ್ ಎಷ್ಟು ಕರಾರುವಕ್ ಆಗಿತ್ತೆಂದರೆ ಗುಜರಾತ್ ಟೈಟಾನ್ಸ್ ಪರ ಅತ್ಯಧಿಕ ರನ್ ಕೊಳ್ಳೆ ಹೊಡೆದಿರುವ ಆರಂಭಿಕರಾದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಕಳಪೆ ಮೊತ್ತಕ್ಕೆ ಪೆವಿಲಿಯನ್ ಗೆ ಕಳುಹಿಸಿದರು.

ಜೋಸ್ ಹಾಜೆಲ್ ವುಡ್ 10 ರನ್ ಗಳಿಸಿದ ಶುಭಮನ್ ಗಿಲ್ ಅವರನ್ನು ಹಾಗೂ ಭುವನೇಶ್ವರ್ ಕುಮಾರ್ 10 ರನ್ ಬಾರಿಸಿದ್ದ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. ಇವರಿಬ್ಬರು ಔಟಾಗುತ್ತಿದ್ದಂತೆ ಆರ್ ಸಿಬಿ ತಂಡದಲ್ಲಿ ಸಂಭ್ರಮ ಮುಗಿಲುಮುಟ್ಟಿತು.

ಇದೇ ಹಿಡಿತವನ್ನು ಕೊನೆಯವರೆಗೂ ಬೌಲರ್ ಗಳು ಕಾಪಾಡಿಕೊಂಡು ಬಂದರು. ರಸಿಕ್ ಖಾನ್ 3 ವಿಕೆಟ್ ಪಡೆದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಗುಜರಾತ್ ಟೈಟಾನ್ಸ್ ಪರ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ ಬರೋಬ್ಬರಿ ಅರ್ಧಶತಕ ಬಾರಿಸಿ ತಂಡವನ್ನು 150ರ ಗಡಿ ದಾಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments