ಸತತ ದರ ಏರಿಕೆಯಿಂದ ತತ್ತರಿಸುತ್ತಿರುವ ರಾಜ್ಯದ ಜನತೆಗೆ ಇದೀಗ ಕೆಎಂಎಫ್ ನಂದಿನಿ ಲೀಟರ್ ಹಾಲಿಗೆ 2.10 ರೂ. ಏರಿಕೆ ಮಾಡಿದೆ.
ಬೆಂಗಳೂರಿನಲ್ಲಿ ಕೆಎಂಎಫ್ ಅಧ್ಯಕ್ಷ ಭಿಮಾ ನಾಯ್ಕ್ ಹಾಲಿನ ದರ ಏರಿಕೆ ವಿಷಯ ಪ್ರಕಟಿಸಿದ್ದು, ನಂದಿನಿ ಹಾಲಿನ ಪರಿಷ್ಕೃತ ದರ ನಾಳೆ ಬೆಳಿಗ್ಗೆಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಅರ್ಧಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ಸೇರಿಸಿ ಮಾರಾಟ ಮಾಡಲಾಗುವುದು. ಇದರಿಂದ ಹಾಲಿನ ದರ ಏರಿಕೆ ಮಾಡಿದಂತೆ ಆಗುವುದಿಲ್ಲ. 1050 ಲೀಟರ್ ಗೆ 2 ರೂ. ಈಗಿನ ದರಕ್ಕಿಂತ ಹೆಚ್ಚುವರಿ 2 ರೂ. ನೀಡಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಪ್ರಸ್ತುತ ನಂದಿನಿ ಹಾಲಿನ ದರ ಲೀಟರ್ ಗೆ 42 ರೂ. ಹಾಗೂ ಅರ್ಧ ಲೀಟರ್ ಗೆ 22 ರೂ. ನಿಗದಿಯಾಗಿದೆ. ಆದರೆ ಪರಿಷ್ಕೃತ ಹಾಲಿನ ದರದಂತೆ ಲೀಟರ್ ಗೆ 44 ರೂ. ಹಾಗೂ ಅರ್ಧ ಲೀಟರ್ ಗೆ 24 ರೂ.ಗೆ ಏರಿಕೆಯಾಗಲಿದೆ.
ಕೆಎಂಎಫ್ ಹಾಲಿನ ದರವನ್ನು ಮಾತ್ರ ಏರಿಕೆ ಮಾಡಲಾಗಿದ್ದು, ಮೊಸರು, ತುಪ್ಪ ಸೇರಿದಂತೆ ಯಾವುದೇ ಉತ್ಪನ್ನಗಳ ದರ ಏರಿಕೆ ಮಾಡಿಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.