ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಏಕರೂಪ ನಾಗರಿಕ ಸಂಹಿತೆ (ಸಿಎಎ) ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
ಲೋಕಸಭೆ ಅಧಿವೇಶನದಲ್ಲಿ 5 ವರ್ಷಗಳ ಹಿಂದೆ ಅಂದರೆ 2019, ಡಿಡಸೆಂಬರ್ ನಲ್ಲಿ ಅಂಗೀಕಾರಗೊಂಡಿದ್ದ ಸಿಎಎ ಮಸೂದೆಗೆ ರಾಷ್ಟ್ರಪತಿ ಅಂಗೀಕಾರವೂ ಲಭಿಸಿತ್ತು. ಇದೀಗ ಕೇಂದ್ರ ಸರ್ಕಾರ ಮಾರ್ಚ್ 11, 2024ರಂದು ಅಧಿಸೂಚನೆ ಹೊರಡಿಸುವ ಮೂಲಕ ಜಾರಿಗೊಳಿಸಿದೆ.
ಕೇಂದ್ರ ಸರ್ಕಾರ ಈ ಹಿಂದೆ 11 ವರ್ಷ ಭಾರತದಲ್ಲಿ ವಾಸವಾಗಿದ್ದವರಿಗೆ ಪೌರತ್ವ ನೀಡುವುದು ಎಂಬ ನಿಯಮ ಜಾರಿ ಮಾಡಿತ್ತು. ಆದರೆ ಇದೀಗ ಈ ಅವಧಿಯನ್ನು 5 ವರ್ಷಗಳಿಗೆ ಕಡಿತ ಮಾಡಿದೆ.
ಧಾರ್ಮಿಕ ಹಾಗೂ ಧರ್ಮದ ಸಮಸ್ಯೆಯಿಂದ ಅಲ್ಪಸಂಖ್ಯಾತ ರಾಷ್ಟ್ರಗಳಿಂದ 2014ರ ಮೊದಲು ಭಾರತಕ್ಕೆ ವಲಸೆ ಬಂದವರಿಗೆ ಈ ನಿಯಮ ಅನ್ವಯವಾಗಲಿದೆ.