ರಾಜಕೀಯ ಪಕ್ಷಗಳಿಗೆ ಎಲೆಕ್ಟ್ರೋ ಬಾಂಡ್ ರೂಪದಲ್ಲಿ ನೀಡಿದ ದೇಣಿಗೆ ವಿವರವನ್ನು 24 ಗಂಟೆಯೊಳಗೆ ನೀಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 24 ಗಂಟೆಗಳ ಗಡುವು ನೀಡಿದೆ.
ಕೇಂದ್ರ ಚುನಾವಣಾ ಆಯೋಗಕ್ಕೆ ನಾಳೆ ಎಲೆಕ್ಷನ್ ಬಾಂಡ್ ವಿವರ ನೀಡಬೇಕು. ಹಾಗೂ ಆಯೋಗವು ಶುಕ್ರವಾರ ಸಂಜೆ 5 ಗಂಟೆಯೊಳಗೆ ತನ್ನ ವೆಬ್ ಸೈಟ್ ನಲ್ಲಿ ಈ ವಿವರಗಳನ್ನು ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠದ ಮುಂದೆ ಎಲೆಕ್ಟ್ರಾಲ್ ಬಾಂಡ್ ವಿವರ ನೀಡಲು 3 ತಿಂಗಳ ಕಾಲವಕಾಶ ನೀಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ.
ಸುಪ್ರೀಂಕೋರ್ಟ್ ಫೆಬ್ರವರಿ 15ರಂದು ನೀಡಿದ ಆದೇಶದಲ್ಲಿ ಎಲೆಕ್ಟ್ರೋಲ್ ಬಾಂಡ್ ನಿಯಮ ಬಾಹಿರ ಎಂದು ಘೋಷಿಸಿತ್ತು. ಅಲ್ಲದೇ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸೂಚಿಸಿತ್ತು.