ಪರೀಕ್ಷೆ ನಡೆದ ಮಾರನೇ ದಿನವೇ ರದ್ದುಗೊಳಿಸಲಾಗಿದ್ದ ಯುಜಿಸಿ-ನೆಟ್ ಮರು ಪರೀಕ್ಷೆ ದಿನಾಂಕ ಘೋಷಿಸಲಾಗಿದ್ದು, ಆಗಸ್ಟ್ 21 ಮತ್ತು ಸೆಪ್ಟೆಂಬರ್ 4ರಂದು ನಡೆಯಲಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಶುಕ್ರವಾರ ಯುಜಿಸಿ-ನೆಟ್ ಮರು ಪರೀಕ್ಷೆಯ ದಿನಾಂಕವನ್ನು ಘೋಷಿಸಿದ್ದು, ಈ ಬಾರಿ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
ಜೂನ್ 2024ರಲ್ಲಿ ನಡೆದ ಪರೀಕ್ಷೆ ವೇಳೆ ಪೆನ್ ಮತ್ತು ಪೇಪರ್ ಬಳಸಲಾಗಿತ್ತು. ಆದರೆ ಈ ಬಾರಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು ಎಂದು ಎನ್ ಟಿಎ ತಿಳಿಸಿದೆ.
ಎನ್ ಸಿಇಟಿ 2024ರಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಜುಲೈ 10, 2024ರಂದು ನಡೆಯಲಿದ್ದರೆ, ಸಿಎಸ್ ಐಆರ್-ಯುಜಿಸಿ ನೆಟ್ ಪರೀಕ್ಷೆ ಜುಲೈ 25ರಿಂದ 27ರವರೆಗೆ ನಡೆಯಲಿದೆ. ಅಖಿಲ ಭಾರತ ಆಯುಷ್ ಪೋಸ್ಟ್ ಗ್ರಾಜ್ಯುಯೆಟ್ ಪರೀಕ್ಷೆ ಜುಲೈ 6 ರಂದು ನಡೆಯಲಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಜೂನ್ 18ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ದೇಶಾದ್ಯಂತ 317 ನಗರಗಳಲ್ಲಿ 1205 ಕೇಂದ್ರಗಳಲ್ಲಿ 11 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.