ನಿಂಬೆಹಣ್ಣಿನಲ್ಲಿ ಅಪಾರ ಪ್ರಮಾಣದ ರೋಗ ನಿರೋಧಕ ಶಕ್ತಿ ಅಡಗಿದೆ. ನಿಂಬೆಹಣ್ಣು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಬಳಲಿಕೆ, ಆಯಾಸ, ದಾಹ ನಿವಾರಿಸುತ್ತದೆ. ಪಿತ್ತವನ್ನು ಶಮನಗೊಳಿಸುತ್ತದೆ.
ಒಂದು ಟೀ ಚಮಚ ನಿಂಬೆ ರಸಕ್ಕೆ ಅಷ್ಟೇ ಪ್ರಮಾಣ ಬಿಳಿ ಈರುಳ್ಳಿ ರಸ ಸೇರಿಸಿ, ಪ್ರತಿದಿನ 2-3 ಬಾರಿ ಸೇವಿಸಿದರೆ ಮಲೇರಿಯಾ ರೋಗ ಗುಣಕಾಣುತ್ತದೆ.
ಜೇನುತುಪ್ಪ ಮತ್ತು ನಿಂಬೆರಸ ಸಮಪ್ರಮಾಣದಲ್ಲಿ ಸೇರಿಸಿ ಸೇವಿಸಿದರೆ ತಲೆನೋವು, ಎದೆನೋವು, ಎದೆ ಉರಿಯುವಿಕೆ, ಹೊಟ್ಟೆ ತೊಳೆಸುವಿಕೆ, ತಲೆ ಸುತ್ತುವಿಕೆ ಹೋಗುತ್ತದೆ.
ಕೂದಲು ಉದುರುತ್ತಿದ್ದರೆ, ನಿಂಬೆರಸ ಹಚ್ಚಿ ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ. ಕೂದಲು ಉದುರುವಿಕೆ ಕ್ರಮೇಣ ಕಡಿಮೆಯಾಗುತ್ತದೆ.
ನಿಂಬೆಹಣ್ಣಿನ ಸಿಪ್ಪೆಯನ್ನು ಮೊಡವೆಗಳ ಮೇಲೆ ತಿಕ್ಕುವುದರಿಂದ ಗುಣ ಕಾಣುವುದು. ಎಳೆಯ ನಿಂಬೆಎಲೆಗಳನ್ನು ಅರಿಶಿಣದೊಂದಿಗೆ ಸಣ್ಣಗೆ ಅರೆದು ಮುಖಕ್ಕೆ ಲೇಪಿಸಿದರೆ ಮೊಡವೆಗಳು ಮಾಯವಾಗುತ್ತವೆ ಅಲ್ಲದೆ ಮುಖದ ಕಾಂತಿ ಹೆಚ್ಚುತ್ತದೆ.
ಎಳೆಯ ನಿಂಬೆ ಎಲೆಗಳನ್ನು ನುಣ್ಣಗೆ ಅರೆದು, ಎಳ್ಳೆಣ್ಣೆಯಲ್ಲಿ ಕಲೆಸಿ ಇದನ್ನು ಕುದಿಸಿ ಕೀಲುನೋವು, ಮಾಂಸ ಖಂಡಗಳ ನೋವು, ಉಳುಕಿದ ಭಾಗದಲ್ಲಾಗುವ ನೋವು ಗುಣಪಡಿಸಲು ಉಪಯೋಗಿಸುತ್ತಾರೆ.
ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದರೆ ಒಂದು ಬಟ್ಟಲು ನೀರಿಗೆ ನಿಂಬೆಹಣ್ಣಿನ ರಸವನ್ನು ಹಿಂಡಿ ಅರ್ಧ ಟೀ ಚಮಚ ಅಡುಗೆ ಸೋಡಾ ಬೆರೆಸಿ ಸೇವಿಸಿದರೆ ಹೊಟ್ಟೆನೋವು ದೂರಾಗುವುದು.
ಗ್ಯಾಸ್ಟ್ರಿಕ್ ನಿಂದ ಬರುವ ಹುಳಿತೇಗು ದೂರ ಮಾಡಲು ಮಧ್ಯಮ ಗಾತ್ರದ ನಿಂಬೆಹಣ್ಣನ್ನು ಕತ್ತರಿಸಿ ರಸ ಹಿಂಡಿಕೊಂಡು ಕುಡಿಯುವುದರಿಂದ ಹುಳಿತೇಗು ದೂರಾಗುವುದು.