Monday, November 25, 2024
Google search engine
Homeತಾಜಾ ಸುದ್ದಿಗೋಬಿ, ಪಾನಿಪೂರಿ ನಂತರ ಶವರ್ಮಗೂ ಕಂಟಕ: ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ!

ಗೋಬಿ, ಪಾನಿಪೂರಿ ನಂತರ ಶವರ್ಮಗೂ ಕಂಟಕ: ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ!

ಗೋಬಿ ಮಂಚೂರಿ, ಕಬಾಬ್ ಕ್ಯಾಂಡಿ ಕಾಟನ್, ಪಾನಿಪೂರಿ ನಂತರ ಇದೀಗ ತಿಂಡಿ ತಿನಿಸುಗಳಿಗೆ ಬಳಸುವ ಶವರ್ಮಕ್ಕೆ ಬಳಸುವ ಪದಾರ್ಥಗಳಲ್ಲಿ ಕೂಡ ರಾಸಾಯನಿಕ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ.

ಚಪಾತಿ ರೋಲ್, ಮಾಂಸಹಾರಿ ರೋಲ್ ಗಳಿಗೆ ಬಳಸಲು ಶವರ್ಮದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ.

ರಾಜ್ಯ ಸರ್ಕಾರ ರಾಜ್ಯದ ವಿವಿದೆಡೆ 17 ಕಡೆ ನಡೆಸಿದ ಪರೀಕ್ಷೆಯಲ್ಲಿ 8 ಕಡೆ ಅಪಾಯಕಾರಿ ಬ್ಯಾಕ್ಟಿರಿಯಾ ಪತ್ತೆಯಾಗಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೋಟೆಲ್ ಗಳಲ್ಲಿ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಎಫ್ ಎಸ್ ಎಸ್ ಎಐ ನೋಂದಣಿ ಮಾಡಿಕೊಂಡಿರಬೇಕು. ನೋಂದಣಿ ಮಾಡಿಕೊಳ್ಳದಿದ್ದರೆ ಕ್ರಮ ಕೈಗೊಳ‍್ಳಲಾಗುವುದು ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ಶವರ್ಮ ತಯಾರಿ ವೇಳೆ ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಕಾಪಾಡಿಕೊಳ್ಳಬೇಕು. ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಹೋಟೆಲ್ ಹಾಗೂ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ರಾಜ್ಯಾದ್ಯಂತ ಆರೋಗ್ಯ ಇಲಾಖೆ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಅಪಾಯಕಾರಿ ರಾಸಾಯನಿಕ ಬಳಸುವ ಪದಾರ್ಥಗಳನ್ನು ನಿಷೇಧಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೆಲವು ತಿಂಗಳಿನಿಂದ ಗೋಬಿ ಮಂಚೂರಿ, ಕ್ಯಾಂಡಿ ಕಾಟನ್, ಕಬಾಬ್ ಮುಂತಾದವುಗಳಿಗೆ ಬಳಸುವ ರಾಸಾಯನಿಕಗಳನ್ನು ನಿಷೇಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments