ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೇ ಜ್ವರದ ಭೀತಿ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 6000 ಗಡಿ ದಾಟಿದ್ದು, 5 ಮಂದಿ ಬಲಿಯಾಗಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಡೆಂಘೇ ಮತ್ತು ಚಿಕನ್ ಗುನ್ಯಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಜನರು ಹಾಗೂ ಸ್ಥಳೀಯ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ರಾಜ್ಯದಲ್ಲಿ ಒಟ್ಟಾರೆ 6187 ಡೇಂಘೇ ಪ್ರಕರಣಗಳು ವರದಿಯಾಗಿದ್ದು, 912 ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ 1563 ಡೆಂಘೇ ಪ್ರಕರಣಗಳು ವರದಿಯಾಗಿದ್ದರೆ, ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆ 4624 ಪ್ರಕರಣಗಳು ವರದಿಯಾಗಿವೆ.
ಮಂಡ್ಯದಲ್ಲಿ 161, ಹಾಸನದಲ್ಲಿ 131, ಚಿಕ್ಕಮಗಳೂರಿನಲ್ಲಿ 189, ಹಾವೇರಿಯಲ್ಲಿ 180, ಶಿವಮೊಗ್ಗದಲ್ಲಿ 221, ತುಮಕೂರಿನಲ್ಲಿ 133 ಹಾಗೂ ಧಾರವಾಡದಲ್ಲಿ 112 ಡೆಂಘೇ ಪ್ರಕರಣಗಳು ವರದಿಯಾಗಿವೆ.