ನಕಲಿ ಎಕೆ-47 ರೈಫಲ್ಸ್ ಹಾಗೂ ಬಾಡಿಗಾರ್ಡ್ ಜೊತೆ ರೀಲ್ಸ್ ಮಾಡುತ್ತಿದ್ದ 26 ವರ್ಷದ ಸಾಮಾಜಿಕ ಜಾಲತಾಣದ ಇನ್ಫೂಯೆನ್ಸರ್ (ಪ್ರಭಾವಿ ವ್ಯಕ್ತಿ) ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಯಾರೋ ಒಬ್ಬ ಎಕೆ-47 ಗನ್ ಹಿಡಿದು ತಿರುಗಾಡುತ್ತಿದ್ದಾನೆ ಎಂದು ಸಾರ್ವಜನಿಕರೊಬ್ಬರು ನೀಡಿದ ದೂರಿನ ಮೇಲೆರೆ ಕೊತ್ತನೂರು ಪೊಲೀಸರು ಅರುಣ್ ಕಟಾರೆ ಎಂಬಾತನನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಕಾಯ್ದೆಯಡಿ ಬಂಧಿಸಿದ್ದಾರೆ.
ನೂತನ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 290ರ ಪ್ರಕಾರ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ನಕಲಿ ಶಸ್ತ್ರಾಸ್ತ್ರ ಹಿಡಿದು ಸಾರ್ಜನಿಕರಲ್ಲಿ ಆತಂಕ ಮೂಡಿಸಿದ ಆರೋಪದ ಮೇಲೆ ಅರುಣ್ ನನ್ನು ಬಂಧಿಸಿ ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಐಷಾರಾಮಿ ಕಾರುಗಳ ಜೊತೆ, ಯುವತಿಯರ ಜೊತೆ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದ ಅರುಣ್, ನಕಲಿ ಎಕೆ-47 ಹಿಡಿದು ರೀಲ್ಸ್ ಮಾಡುತ್ತಿದ್ದನ್ನು ಸಾರ್ವಜನಿಕರು ನಿಜವಾದ ಗನ್ ಹಿಡಿದು ತಿರುಗಾಡುತ್ತಿದ್ದಾನೆ ಎಂದು ಭಾವಿಸಿದ್ದರು.
ಅರುಣ್ ನನ್ನು ಬಂಧಿಸಿದ ಕೆಲವೇ ನಿಮಿಷಗಳ ನಂತರ ಪೊಲೀಸರು ನಾವು ಕೇವಲ ನೋಡುತ್ತಾ ಕೂರುವುದಿಲ್ಲ. ಬದಲಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರೀಲ್ಸ್ ಮಾಡಲು ಕಸರತ್ತು ಮಾಡುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
That moment when 'likes' turn into 'cuffs'. Bengaluru City Police doesn't just watch; we act#WeServeWeProtect pic.twitter.com/YKMTefvxvl
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 2, 2024