ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಭಾರೀ ಏರಿಕೆಯಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಚಿನ್ನದ ದರ ಗ್ರಾಂಗೆ 148 ರೂ. ಅಂದರೆ ಸುಮಾರು ಶೇ,0,21ರಷ್ಟು ಏರಿಕೆಯಾಗಿದ್ದು, 71,554ಕ್ಕೆ ತಲುಪಿದೆ.
ಬೆಳ್ಳಿ ದರ ಒಂದು ಕೆಜಿಗೆ 413 ರೂ. ಅಂದರೆ ಶೇ.0.46ರಷ್ಟು ಏರಿಕೆಯಾಗಿದ್ದು, 90.306ರೂ.ಗೆ ಜಿಗಿತ ಕಂಡಿದೆ. ಹಿಂದಿನ ದಿನ 89,893ರೂ. ಆಗಿತ್ತು.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಹಲವಾರು ಅಂಶಗಳನ್ನು ಆಧರಿಸಿ ನಿರ್ಧಾರವಾಗುತ್ತದೆ. ಇದರಲ್ಲಿ ಅಮರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ, ಜಾಗತಿಕ ಬೇಡಿಕೆ ಮುಂತಾದವು ಪರಿಗಣನೆಗೆ ಬರುತ್ತವೆ.