ಒಂದೇ ದಿನ 2 ಕಡೆ ಸೇತುವೆಗಳು ಕುಸಿದುಬಿದ್ದಿವೆ. ಇದರಿಂದ ಬಿಹಾರದಲ್ಲಿ ಸರಣಿ ಸೇತುವೆ ಕುಸಿತ ಪ್ರಕರಣಗಳು ಮುಂದುವರಿಯುತ್ತಿದ್ದು 15 ದಿನಗಳಲ್ಲಿ ಸಂಭವಿಸಿದ 9ನೇ ಘಟನೆಯಾಗಿದೆ.
ಬಿಹಾರದಲ್ಲಿನ ಸತತವಾಗಿ ಸೇತುವೆಗಳು ಕುಸಿದು ಬೀಳುತ್ತಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಆದರೂ ಸೇತುವೆ ಕುಸಿತ ಪ್ರಕರಣ ಮುಂದುವರಿಯುತ್ತಲೇ ಇದೆ.
ಗಂಡಕಿ ನದಿಗೆ ಅಡ್ಡಲಾಗಿದ್ದ ಕಟ್ಟಲಾಗಿದ್ದ ಎರಡು ಸೇತುವೆಗಳು ಕುಸಿದು ಬಿದ್ದಿವೆ. ಒಂದು ಸೇತುವೆ 2004ರಲ್ಲಿ ನಿರ್ಮಾಣವಾಗಿದ್ದಾದರೆ, ಮತ್ತೊಂದು ಸೇತುವೆ ಬ್ರಿಟಿಷರ ಕಾಲದಲ್ಲಿ ಅಂದರೆ ಸುಮಾರು 100 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.
ಮುಂಗಾರು ಮಳೆ ಅಬ್ಬರ ಆರಂಭವಾದ ಬೆನ್ನಲ್ಲೇ ಸೇತುವೆ ಕೆಳಗೆ ಸ್ವಚ್ಛತಾ ಕಾರ್ಯ ನಡೆಯುವಾಗ ಈ ಘಟನೆ ಸಂಭವಿಸಿದ್ದು, ಸೇತುವೆ ಕುಸಿತದಿಂದ ಯಾವುದೇ ಸಾವು-ನೋವು ವರದಿಯಾಗಿಲ್ಲ.