Friday, November 22, 2024
Google search engine
Homeತಾಜಾ ಸುದ್ದಿಬ್ರಿಟನ್ ಚುನಾವಣೆ: ಲೇಬರ್ ಪಕ್ಷಕ್ಕೆ 60ರಲ್ಲಿ ಮುನ್ನಡೆ, 4ಕ್ಕೆ ಕುಸಿದ ರಿಷಿ ಸುನಕ್ ಪಕ್ಷ!

ಬ್ರಿಟನ್ ಚುನಾವಣೆ: ಲೇಬರ್ ಪಕ್ಷಕ್ಕೆ 60ರಲ್ಲಿ ಮುನ್ನಡೆ, 4ಕ್ಕೆ ಕುಸಿದ ರಿಷಿ ಸುನಕ್ ಪಕ್ಷ!

ಬ್ರಿಟನ್ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಪ್ರಧಾನಿ ರಿಷಿ ಸುನಕ್ ನೇತೃತ್ವದ ಆಡಳಿತಾರೂಢ ಕಾನ್ಸರ್ವೆಟಿವ್ ಪಕ್ಷ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಲೇಬರ್ ಪಕ್ಷ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಜಯಭೇರಿ ಗಳಿಸುವ ಮುನ್ಸೂಚನೆ ನೀಡಿದೆ.

ಲೇಬರ್ ಪಕ್ಷ ಅಧಿಕಾರಕ್ಕೆ ಬಂದರೆ ತೆರಿಗೆ ದರ ಹೆಚ್ಚಿಸಲಾಗುತ್ತದೆ ಎಂದು ಕನ್ಸರ್ವೆಟಿವ್ ಪಕ್ಷದ ಪರ ಕೊನೆಯ ಹಂತದಲ್ಲಿ ರಿಷಿ ಸುನಕ್ ನಡೆಸಿದ ಹೋರಾಟ ಯಾವುದೇ ಫಲ ನೀಡಿಲ್ಲ. ಅಲ್ಲದೇ ಚುನಾವಣಾ ಪೂರ್ವ ಸಮೀಕ್ಷೆಗಳು ನಿಜವಾಗುವ ಸೂಚನೆ ದೊರೆತಿದೆ.

650 ಸದಸ್ಯರ ಸದನದಲ್ಲಿ ಅಧಿಕಾರ ಹಿಡಿಯಬೇಕಾದರೆ 326 ಸ್ಥಾನಗಳಲ್ಲಿ ಗೆಲುವು ಪಡೆಯಬೇಕಾಗಿದೆ. ಮತ ಎಣಿಕೆ ಆರಂಭದಲ್ಲೇ ಲೇಬರ್ ಪಕ್ಷ ಭಾರೀ ಮುನ್ನಡೆಯೊಂದಿಗೆ ಗೆಲುವು ಸಾಧಿಸುವ ಸೂಚನೆ ದೊರೆತಿದ್ದು, ಮಧ್ಯಾಹ್ನ 11 ಗಂಟೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ ಸೇರಿದಂತೆ 650 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾತ್ರಿ 10 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಸುಮಾರು 40,000 ಕೇಂದ್ರಗಳಲ್ಲಿ 46 ದಶಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಚುನಾವಣೆ ಮೂಲಕ ಇದೇ ಮೊದಲ ಬಾರಿಗೆ ಹೊಸ ಮತದಾರರ ಗುರುತಿನ ಚೀಟಿ ಪರಿಚಯಿಸಲಾಗಿದೆ.

ಕನ್ಸರ್ವೆಟಿವ್ ಪಕ್ಷ ಕಳೆದ 14 ವರ್ಷಗಳಿಂದ ಚುಕ್ಕಾಣಿ ಹಿಡಿದಿದ್ದು, ಸತತ 5ನೇ ಬಾರಿ ಗೆಲುವಿಗಾಗಿ ಹೋರಾಟ ನಡೆಸಿದೆ. ಆದರೆ ಪ್ರಧಾನಿ ಸ್ಥಾನ ಅಲಂಕರಿಸಿರುವ ಸುನಕ್ ತಮ್ಮದೇ ಯಾರ್ಕ್‌ ಶೈರ್ ಕ್ಷೇತ್ರವಾದ ರಿಚ್‌ಮಂಡ್ ಮತ್ತು ನಾರ್ಥಲ್ಟನ್ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಸುನಕ್ 2019ರಲ್ಲಿ 27,000 ಮತಗಳ ಬಹುಮತದೊಂದಿಗೆ ಗೆಲುವು ಕಂಡಿದ್ದರು.

2019ರ ಕೊನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ಸ್ 365 ಸ್ಥಾನಗಳನ್ನು ಗೆದ್ದು 80 ಸ್ಥಾನಗಳ ಬಹುಮತವನ್ನು ಪಡೆದುಕೊಂಡಿತು. ಲೇಬರ್ 202 ಸ್ಥಾನಗಳನ್ನು, ಎಸ್ ಎನ್ ಪಿ 48, ಮತ್ತು ಲಿಬರಲ್ ಡೆಮೋಕ್ರಾಟ್ 11 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ, 8 ವರ್ಷಗಳಲ್ಲಿ ಆಂತರಿಕ ಕಲಹ ಮತ್ತು ಐದು ವಿಭಿನ್ನ ಪ್ರಧಾನ ಮಂತ್ರಿಗಳಿಂದ ಗುರುತಿಸಲ್ಪಟ್ಟ ಅವಧಿಯ ನಂತರ ಟೋರಿಗಳು ಮತದಾರರ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments