Thursday, September 19, 2024
Google search engine
Homeಅಪರಾಧವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನ ಪಬ್ ವಿರುದ್ಧ ಎಫ್ ಐಆರ್!

ವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನ ಪಬ್ ವಿರುದ್ಧ ಎಫ್ ಐಆರ್!

ಭಾರತ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನ ಒನ್ 8 ಕಮ್ಯೂನ್ ಪಬ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರುಗಡೆ ಕಟ್ಟಡದ ಮೇಲ್ಫಾವಣಿಯಲ್ಲಿರುವ ಕೊಹ್ಲಿ ಒಡೆತನದ ಒನ್ 8 ಕಮ್ಯೂನ್ (One8 Commune Pub) ವಿರುದ್ಧ ಕಸ್ತೂರ್ಬಾ ರಸ್ತೆಯಲ್ಲಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚಲು ನಿಗದಿ ಪಡಿಸಿದ ಗಡುವು ಮೀರಿ ರಾತ್ರಿ 1.30ರವರೆಗೂ ತೆರೆದಿದ್ದು, ಗ್ರಾಹಕರನ್ನು ಆಹ್ವಾನಿಸಲಾಗುತ್ತಿತ್ತು. ಇದನ್ನು ಗಸ್ತಿನಲ್ಲಿದ್ದ ಪೊಲೀಸರು ಗಮನಿಸಿ ಎಚ್ಚರಿಕೆ ನೀಡಿದ್ದರು. ಆದರೂ ಪಬ್ ಓಪನ್ ಆಗಿದ್ದರಿಂದ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ರಾತ್ರಿ 1.20ರವರೆಗೂ ಪಬ್ ಓಪನ್ ಮಾಡಿದ್ದ ಆರೋಪದಡಿ ನಗರದ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್, ಚರ್ಚ್ ಸ್ಟ್ರೀಟ್‌ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ ಓಪನ್ ಆಗಿದ್ದ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪಬ್​​ನಲ್ಲಿ ತಡರಾತ್ರಿ 1.30 ಆಗಿದ್ದರೂ ಗ್ರಾಹಕರು ಇದ್ದರು. ನಿಯಮ ಉಲ್ಲಂಘಿಸಿ ರಾತ್ರಿ ಅವಧಿಗೂ ಮೀರಿ ಪಬ್ ಓಪನ್​​​ ಮಾಡಿದ ಹಿನ್ನೆಲೆ ಪಬ್ ಹಾಗೂ ಪಬ್ ನ ಮ್ಯಾನೇಜರ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ‌ ಶೇಖರ್ ಹೆಚ್.ಟಿ. ಪ್ರತಿಕ್ರಿಯೆ ನೀಡಿದ್ದು ಸರ್ಕಾರ ನಿಗದಿ ಪಡಿಸಿದ ಅವಧಿ ಉಲ್ಲಂಘಿಸಿ ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒನ್ 8 ಕಮ್ಯೂನ್ ಮಾತ್ರವಲ್ಲದೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಕೇಂದ್ರ ವಿಭಾಗದ ಇನ್ನೂ ಕೆಲ ರೆಸ್ಟೋರೆಂಟ್ ಹಾಗೂ ಪಬ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments