ಚೀನಾದ ಗಡಿಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 70 ಕೋಟಿ ರೂ. ಮೌಲ್ಯದ 108 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಲಡಾಖ್ ಇತಿಹಾಸದಲ್ಲೇ ಅತೀ ದೊಡ್ಡ ಬೇಟೆಯಾಗಿದೆ.
ಚೀನಾಗೆ ಹೊಂದಿಕೊಂಡಿರುವ ಲಡಾಖ್ ಬಳಿಯ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ವಶಪಡಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ ಮೊಬೈಲ್ ಫೋನ್, ಚಾಕು ಮುಂತಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಟೆನ್ಸಿಂಗ್ ಟಾರ್ಗೆ ಮತ್ತು ಶೆರಿಂಗ್ ಚಂಬಾ ಅವರನ್ನು ಬಂಧಿಸಿದ್ದು, ಪ್ರತಿಯೊಂದು ಚಿನ್ನದ ಗಟ್ಟಿಯೂ ಒಂದು ಕೆಜಿ ತೂಕದ ಭಾರ ಹೊಂದಿತ್ತು.
ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿ ಚಿನ್ನ ಸಾಗಾಣೆ ಕುರಿತು ಗುಪ್ತಚರ ಮಾಹಿತಿ ಆಧಾರಿಸಿ 21ನೇ ಬ್ಯಾಟಲಿಯನ್ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿತು. ಗಡಿ ಬೇಲಿ ದಾಟಲು ಕೇವಲ 1 ಕಿ.ಮೀ. ದೂರದಲ್ಲಿ ಹೊರಗೆ ಹೋಗಲು ಯತ್ನಿಸುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವೈದ್ಯಕೀಯ ಸಸ್ಯಗಳ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಇಬ್ಬರು ವಾದಿಸಿದರು. ನಂತರ ಅವರನ್ನು ತಪಾಸಣೆ ಮಾಡಿದಾಗ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಕೂಡಲೇ ಅವರನ್ನು ಬಂಧಿಸಲು ಹೋದಾತ ತಪ್ಪಿಸಿಕೊಂಡು ಓಡಿಒ ಹೋಗಲು ಯತ್ನಿಸಿದ್ದಾರೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.