Monday, November 25, 2024
Google search engine
Homeತಾಜಾ ಸುದ್ದಿ2060ರ ವೇಳೆಗೆ ಭಾರತದ ಜನಸಂಖ್ಯೆ 170 ಕೋಟಿಗೆ ಜಿಗಿತ: ವಿಶ್ವಸಂಸ್ಥೆ ವರದಿ

2060ರ ವೇಳೆಗೆ ಭಾರತದ ಜನಸಂಖ್ಯೆ 170 ಕೋಟಿಗೆ ಜಿಗಿತ: ವಿಶ್ವಸಂಸ್ಥೆ ವರದಿ

ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದದ ಜನಸಂಖ್ಯೆ 2060ರ ವೇಳೆಗೆ 170 ಕೋಟಿ ದಾಟಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಭಾರತದ ಜನಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, 2016ರ ವೇಳೆಗೆ 170 ಕೋಟಿಗೆ ಅಂದರೆ ಶೇ.12ರಷ್ಟು ಏರಿಕೆಯಾಗಲಿದೆ. ನಂತರದ ದಿನಗಳಲ್ಲಿ ಜನಸಂಖ್ಯೆಯಲ್ಲಿ ಇಳಿಮುಖ ಆಗಲಿದ್ದರೂ ಈ ಶತಮಾನದ ಕೊನೆಯವರೆಗೂ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಉಳಿಯಲಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

2100ರ ವೇಳೆಗೆ ಭಾರತದ ಜನಸಂಖ್ಯೆಯಲ್ಲಿ ಭಾರೀ ಇಳಿಕೆ ಆಗಲಿದೆ. ಆದರೆ ಚೀನಾಗೆ ಹೋಲಿಸಿದರೆ 2.5 ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರಲಿದೆ. ಚೀನಾದ ಜನಸಂಖ್ಯೆ ಈಗ ಇರುವುದಕ್ಕಿಂತ ಅರ್ಧದಷ್ಟು ಕಡಿಮೆ ಆಗಲಿದ್ದು, 1950ರ ಜನಸಂಖ್ಯೆಗೆ ಮರಳಲಿದೆ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆ ಭವಿಷ್ಯದ ವರದಿ 2024 ಶುಕ್ರವಾರ ಬಿಡುಗಡೆ ಮಾಡಿದ್ದು, ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚಳ 50ರಿಂದ 60 ವರ್ಷ ಮುಂದುವರಿಯಲಿದೆ. ಇದರಿಂದ ಜಗತ್ತಿನ ಜನಸಂಖ್ಯೆ 2024ರ ಅವಧಿಯಲ್ಲಿ 820 ಕೋಟಿ ಇರುವ ಜನಸಂಖ್ಯೆ 2080ರ ವೇಳೆಗೆ 1000 ಕೋಟಿ ದಾಟಲಿದೆ ಎಂದು ಹೇಳಿದೆ.

ಕಳೆದ ವರ್ಷವಷ್ಟೇ ಚೀನಾವನ್ನು ಹಿಂದಿಕ್ಕಿದ ಭಾರತ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಪಟ್ಟ ಅಲಂಕರಿಸಿದ್ದು, ಇದೇ ಸ್ಥಾನದಲ್ಲಿ 2100ರವರೆಗೂ ಮುಂದುವರಿಯಲಿದೆ. ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಇದಕ್ಕೆ ಕಾರಣ ಎಂದು ವಿಶ್ವಸಂಸ್ಥೆ ಆರೋಪಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments