ಪಿಡಿಓ ಮತ್ತು ಬಿಸಿಎಂ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಲೋಕಸಭಾ ಆಯೋಗ ನಿಗದಿಪಡಿಸಿದ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಹೀಗಿದೆ.
ಪಿಎಸ್ ಸಿ 1 ಆರ್ ಟಿ ಬಿ-1
ಕನ್ನಡ ಭಾಷಾ ಪರೀಕ್ಷೆ (ಉಳಿಕೆ ಮೂಲ ವೃಂದ)- ಸೆಪ್ಟೆಂಬರ್ 14, 2024
ಸಾಮಾನ್ಯ ಪತ್ರಿಕೆ-1 (ಉಳಿಕೆ ಮೂಲ ವೃಂದ)- ಸೆಪ್ಟೆಂಬರ್ 15, 2024 ಬೆಳಿಗ್ಗೆ
ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು/ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಉಳಿಕೆ ಮೂಲ ವೃಂದ)- ಸೆಪ್ಟೆಂಬರ್ 15, 2024 ಮಧ್ಯಾಹ್ನ
ಪಿಎಸ್ ಸಿ 1 ಆರ್ ಟಿ ಬಿ-2
ಕನ್ನಡ ಭಾಷಾ ಪರೀಕ್ಷೆ (ಉಳಿಕೆ ಮೂಲ ವೃಂದ)- ಸೆಪ್ಟೆಂಬರ್ 19, 2024
ಸಾಮಾನ್ಯ ಪತ್ರಿಕೆ-1 (ಉಳಿಕೆ ಮೂಲ ವೃಂದ)- ಸೆಪ್ಟೆಂಬರ್ 20, 2024 ಬೆಳಿಗ್ಗೆ
ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು/ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಉಳಿಕೆ ಮೂಲ ವೃಂದ)- ಸೆಪ್ಟೆಂಬರ್ 20, 2024 ಮಧ್ಯಾಹ್ನ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಹೈದರಾಬಾದ್- ಕರ್ನಾಟಕ 97 ಹುದ್ದೆಗಳು) – ನವೆಂಬರ್ 16, 2024, ಕನ್ನಡ ಭಾಷಾ ಪರೀಕ್ಷೆ- ಬೆಳಿಗ್ಗೆ, ಸ್ಪರ್ಧಾತ್ಮಕ ಪರೀಕ್ಷೆ- ಮಧ‍್ಯಾಹ್ನ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಉಳಿಕೆ ಮೂಲ ವೃಂದ 150 ಹುದ್ದೆಗಳು) – ಡಿಸೆಂಬರ್ 17, 2024, ಕನ್ನಡ ಭಾಷಾ ಪರೀಕ್ಷೆ- ಬೆಳಿಗ್ಗೆ, ಸ್ಪರ್ಧಾತ್ಮಕ ಪರೀಕ್ಷೆ- ಮಧ‍್ಯಾಹ್ನ