ಹಮಾಜ್ ಮುಖ್ಯಸ್ಥನನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ 71 ನಾಗರಿಕರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಹಮಾಜ್ ಮುಖ್ಯಸ್ಥ ಮೊಹಮದ್ ಡೆಫಿ ಅವರನ್ನು ಗುರಿಯಾಗಿಸಿ ಅವರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. 71 ಮಂದಿ ಮೃತಪಟ್ಟಿದ್ದಾರೆ. ಆದರೆ ಮೊಹಮದ್ ಡೆಫಿ ಹತ್ಯೆ ಆಗಿದ್ದಾರೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ.
ಇಸ್ರೇಲ್ ರೇಡಿಯೊ ಈ ವರದಿಯನ್ನು ಮಾಡಿದ್ದು, ಖಾನ್ ಯೂನಿಸ್ ನಗರದಲ್ಲಿ ಇಸ್ರೇಲ್ ವಿನ್ಯಾಸಗೊಳಿಸಿದ ಜೋನ್ ಅಲ್ ಮವಾಸಿಯಲ್ಲಿ ಡೆಫಿ ಅಡಗಿದ್ದಾರೆ ಎಂಬ ಮಾಹಿತಿ ಮೇಲೆ ದಾಳಿ ನಡೆದಿತ್ತು.
ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆದ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದು, ಅಲ್ಲಿಂದ ಇಲ್ಲಿಯವರೆಗೆ 7 ಬಾರಿ ಹತ್ಯೆ ಪ್ರಯತ್ನ ನಡೆಸಿದ್ದು ಅದರಲ್ಲಿ ಡೆಫಿ ಪಾರಾಗಿದ್ದಾರೆ. 2021ರಿಂದ ಡೆಫಿ ಇಸ್ರೇಲ್ ನ ಮೋಸ್ಟ್ ವಾಂಟೆಡ್ ಆಗಿದ್ದಾರೆ ಎಂದು ವರದಿ ಹೇಳಿದೆ.