ಕೇಂದ್ರ ಸರ್ಕಾರ ಇಸ್ರೇಲ್ ದಾಳಿಗೆ ನಲುಗಿರುವ ಪ್ಯಾಲೆಸ್ತಿನ್ ನಿರಾಶ್ರಿತರ ನೆರವಿನಿಂದ ಮೊದಲ ಹಂತವಾಗಿ 2.5 ದಶಲಕ್ಷ ಡಾಲರ್ ನೆರವು ಬಿಡುಗಡೆ ಮಾಡಿದೆ.
ಪ್ಯಾಲೆಸ್ತೇನ್ ನಲ್ಲಿ ನಿರಾಶ್ತಿತರ ನೆರವಿಗೆ ಶ್ರಮಿಸುತ್ತಿರುವ ವಿಶ್ವಸಂಸ್ಥೆಯ ನೆರವು ಹಾಗೂ ಪುನಶ್ಚೇತನ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಮೊದಲ ಹಂತವಾಗಿ 2.5 ದಶಲಕ್ಷ ಡಾಲರ್ ನೆರವು ಕಳುಹಿಸಿಕೊಟ್ಟಿದೆ.
2024-25ನೇ ಸಾಲಿನಲ್ಲಿ ಭಾರತ 5 ದಶಲಕ್ಷ ಡಾಲರ್ ನೆರವು ನೀಡಬೇಕಿದ್ದು, ಮೊದಲ ಹಂತವಾಗಿ 2.5 ದಶಲಕ್ಷ ಡಾಲರ್ ನೆರವು ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ನೆರವು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಕ್ಸ್ ನಲ್ಲಿ ರಾಮಲ್ಲಾಹ್ ನಲ್ಲಿನ ಭಾರತದ ರಾಯಭಾರ ಕಚೇರಿ ಪೋಸ್ಟ್ ಮಾಡಿದ್ದು, ವಾರ್ಷಿಕ 5 ದಶಲಕ್ಷ ಡಾಲರ್ ನೆರವು ವಿಶ್ವಸಂಸ್ಥೆಗೆ ನೀಡಬೇಕಿದ್ದು, ಮೊದಲ ಹಂತವಾಗಿ 2.5 ದಶಲಕ್ಷ ಡಾಲರ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.