ಅಲ್ಪಸಂಖ್ಯಾತರನ್ನು ಓಲೈಸಲು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷವಾಕ್ಯವನ್ನು ನಿಲ್ಲಿಸಿ ಎಂದು ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೈಕಮಾಂಡ್ ಅನ್ನು ಆಗ್ರಹಿಸಿದ್ದಾರೆ.
ಕೋಲ್ಕತಾದಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷವಾಕ್ಯವನ್ನು ತೆಗೆದುಹಾಕಿ ಜೋ ಹಮಾರಾ ಸಾಥ್, ಹಮ್ ಉನ್ಕೆ ಸಾಥ್ (ಯಾರೂ ನಮ್ಮ ಜೊತೆಗಿದ್ದಾರೆ, ನಾವು ಅವರ ಜೊತೆಗಿದ್ದೇವೆ) ಎಂದು ಬದಲಿಸಬೇಕು ಎಂದಿದ್ದಾರೆ.
ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಮುಖಭಂಗ ಉಂಟಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ಸುವೇಂದು ಅಧಿಕಾರಿ, ನಾನು ಮುಸ್ಲಿಮ್ ರಾಷ್ಟ್ರೀಯವಾದಿಗಳ ಬಳಿ ಮಾತನಾಡುತ್ತೇನೆ. ನಮಗೆ ಇನ್ನು ಮುಂದೆ ಪಕ್ಷದಲ್ಲಿ ಅಲ್ಪಾ ಸಂಖ್ಯಾತ ಮೋರ್ಚಾದ ಅಗತ್ಯವಿಲ್ಲ ಎಂದು ಹೇಳಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಜಾತಿ, ಧರ್ಮ ಮೀರಿ ಎಲ್ಲರೂ ಒಗ್ಗೂಡಿ ಮತ ಹಾಕಲಿ ಎಂಬ ಕಾರಣಕ್ಕೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆ ಮಾಡಿದ್ದರು.