8 ಭಾರತೀಯರು ಸೇರಿದಂತೆ 9 ಮಂದಿಯನ್ನು ಓಮನ್ ಸಮುದ್ರದಲ್ಲಿ ತೈಲ ಟ್ಯಾಂಕರ್ ಮಗುಚಿ ಬಿದ್ದಿದ್ದರಿಂದ ನಾಪತ್ತೆಯಾಗಿದ್ದ ತೈಲ ಟ್ಯಾಂಕರ್ ನಿಂದ ರಕ್ಷಿಸಲಾಗಿದೆ.
ಟ್ಯಾಂಕರ್ ಸಮುದ್ರದಲ್ಲಿ ಮುಳುಗಡೆ ಆಗಿದ್ದರಿಂದ ಹಡಗಿನಲ್ಲಿದ್ದ 16 ಸಿಬ್ಬಂದಿ ನಾಪತ್ತೆಯಾಗಿದ್ದರು. ಇದೀಗ 9 ಮಂದಿಯನ್ನು ರಕ್ಷಿಸಲಾಗಿದ್ದು, ಇದರಲ್ಲಿ 8 ಮಂದಿ ಭಾರತೀಯರು ಹಾಗೂ ಒಬ್ಬ ಶ್ರೀಲಂಕಾ ಸಿಬ್ಬಂದಿ ಎಂದು ಹೇಳಲಾಗಿದೆ.
ಓಮನ್ ನ ಬಂದರು ನಗರಿ ಡುಕ್ವಿನ್ ನಿಂದ 25 ನಾಟಿಕಲ್ ಮೈಲು ದೂರದಲ್ಲಿ ರಾಸ್ ಮದ್ರಕಾಹ್ ಸಮುದ್ರದ ಮಧ್ಯದಲ್ಲಿ ಎಂಟಿ ಫಾಲ್ಕೂನ್ ಪ್ರಸ್ಟೀಜ್ ಇಂಧನ ಸಾಗಿಸುವ ಟ್ಯಾಂಕರ್ ಮಗುಚಿಕೊಂಡಿತ್ತು.
ತೈಲ ಗಣಿಗಾರಿಕೆಯಿಂದ ಈ ಹಡಗು ತೈಲ ಸಾಗಿಸುತ್ತಿದ್ದು, ಯೆಮೆನ್ ನ ಬಂದರು ಆಡೆನ್ ಗೆ ತೆರಳುತ್ತಿತ್ತು. ಜುಲೈ 15ರಂದು ಬೆಳಿಗ್ಗೆ 10 ಗಂಟೆಗೆ ಮಗುಚಿಕೊಂಡಿತ್ತು.