ವಿಶ್ವದಲ್ಲೇ ಪತ್ತೆಯಾಗಿರುವ ಅತೀ ದೊಡ್ಡ ಡೈನೋಜರ್ ಅಸ್ಥಿಪಂಜರ ಸಾರ್ವಕಾಲಿಕ ದಾಖಲೆಯ 44.6 ದಶಲಕ್ಷ ಡಾಲರ್ ಗೆ (ಸುಮಾರು 36 ಕೋಟಿ ರೂ.) ಮಾರಾಟವಾಗಿದೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆದ ಹರಾಜಿನಲ್ಲಿ `ಅಪೆಕ್ಸ್’ ಎಂದು ಹೆಸರಿಸಲಾದ ಬಹುತೇಕ ಪೂರ್ಣ ಪ್ರಮಾಣದ ಡೈನೋಜರ್ ಅಸ್ಥಿಪಂಜರ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ.
150 ದಶಲಕ್ಷ ವರ್ಷದ ಹಿಂದೆ ಜೀವಿಸಿದ್ದು ಎನ್ನಲಾದ ಅಪೆಕ್ಸ್ ಡೈನೋಜರ್ ಇದುವರೆಗೆ ಪತ್ತೆಯಾದ ಡೈನೋಜರ್ ಗಳ ಅಸ್ಥಿಪಂಜರಗಳ ಪೈಕಿ ಅತ್ಯಂತ ದೊಡ್ಡದು ಹಾಗೂ ಬಹುತೇಕ ಪೂರ್ಣ ಪ್ರಮಾಣದ್ದು ಎನ್ನಲಾಗಿದೆ.
11 ಅಡಿ ಎತ್ತರ, 27 ಅಡಿ ಉದ್ದದ ಈ ಡೈನೋಜರ್ ಅಸ್ಥಿಪಂಜರದಲ್ಲಿ 254 ಬೆನ್ನುಮೂಳೆ ಸೇರಿದಂತೆ ಒಟ್ಟಾರೆ 319 ಮೂಳೆಗಳನ್ನು ಹೊಂದಿದೆ.
ಇದಕ್ಕೂ ಮುನ್ನ 2020ರಲ್ಲಿ `ಸ್ಟಾನ್’ ಹೆಸರಿನ ಟ್ರೈನೊಜರಸ್ ಅಸ್ಥಿಪಂಜರ 31.8 ದಶಲಕ್ಷ ಡಾಲರ್ ಗೆ ಮಾರಾಟವಾಗಿದ್ದು ದಾಖಲೆಯಾಗಿತ್ತು. ಅಪೆಕ್ಸ್ ಡೈನೋಜರ್ ಕೂಡ 3ರಿಂದ 4 ದಶಲಕ್ಷ ಮಾರಾಟವಾಗುವ ಸಾಧ್ಯತೆ ಇತ್ತು. ಆದರೆ ಅಂತಿಮ ಗಳಿಗೆಯಲ್ಲಿ ದೂರವಾಣಿ ಮೂಲಕ ಬಿಡ್ ಮಾಡಲಾಗಿದ್ದು, ದಿಢೀರನೆ ಪೈಪೋಟಿ ಕಂಡು ಬಂದು 44.6 ದಶಲಕ್ಷ ಡಾಲರ್ ಗೆ ಮಾರಾಟವಾಗಿದೆ.