Monday, November 25, 2024
Google search engine
HomeಅಪರಾಧKodagu: ಬೇರೊಬ್ಬನ ಜೊತೆ ಫೋನಲ್ಲಿ ಮಾತನಾಡಿದ ಮಾಜಿ ಗ್ರಾ.ಪಂ. ಸದಸ್ಯೆಗೆ ಗುಂಡಿಕ್ಕಿ ಕೊಂದ ಪತಿ!

Kodagu: ಬೇರೊಬ್ಬನ ಜೊತೆ ಫೋನಲ್ಲಿ ಮಾತನಾಡಿದ ಮಾಜಿ ಗ್ರಾ.ಪಂ. ಸದಸ್ಯೆಗೆ ಗುಂಡಿಕ್ಕಿ ಕೊಂದ ಪತಿ!

ಬೇರೊಬ್ಬನ ಜೊತೆ ಫೊನ್ ನಲ್ಲಿ ಮಾತನಾಡಿದ್ದಕ್ಕೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆಯನ್ನು ಪತಿ ಗುಂಡಿಕ್ಕಿ ಕೊಂದ ಘಟನೆ ಕೊಡಗಿನ ವಿರಾಜಪೇಟೆಯಲ್ಲಿ ನಡೆದಿದೆ.

ವಿರಾಜಪೇಟೆಯ ಬೇಟೊಳಿ ಗ್ರಾಮ ಪಂಚಾಯತಿ ಸದಸ್ಯೆ ಶಿಲ್ಪ ಸೀತಮ್ಮ (40) ಕೊಲೆಯಾಗಿದ್ದು, ಕೊಲೆಗೈದ ಪತಿ ನಾಯಕಂಡ ಬೋಪಣ್ಣ (45) ನಂತರ ಪೊಲೀಸ್ ಠಾಣೆಗೆ ಕೋವಿ ಸಮೇತ ಶರಣಾಗಿದ್ದಾನೆ.

ಶನಿವಾರ ಬೆಳಿಗ್ಗೆ 9 ಗಂಟೆಗೆ ಈ ಘಟನೆ ನಡೆದಿದ್ದು, ಶಿಲ್ಪಾ 2012 ರಿಂದ 2017ರವರೆಗೆ ಗ್ರಾಮ ಪಂಚಾಯಿತಿ ಸದಸ್ಯೆ ಆಗಿದ್ದರು.

ಶುಕ್ರವಾರ ರಾತ್ರಿ ಶಿಲ್ಪಾ ಬೇರೋಬ್ಬ ವ್ಯಕ್ತಿಯೊಂದಿಗೆ ಫೋನ್ ನಲ್ಲಿ ಮಸತನಾಡುತ್ತಿದ್ದರು. ಬೆಳಿಗ್ಗೆ ಈ ವಿಷಯದಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಕೊಲೆಯಲ್ಲಿ ಅಂತ್ಯಗೊಂಡಿದೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments