ಚುನಾವಣಾ ಬಾಂಡ್ ಮೂಲಕ ಆಡಳಿತಾರೂಢ ಬಿಜೆಪಿ 7000 ಕೋಟಿ ರೂ. ದೇಣಿಗೆ ಪಡೆದು ಇತರೆ ಪಕ್ಷಗಳಿಗಿಂತ ಮುಂಚೂಣಿಯಲ್ಲಿದೆ.
ರಾಜಕೀಯ ಪಕ್ಷಗಳಿಗೆ ನೀಡಲಾದ ಚುನಾವಣಾ ಬಾಂಡ್ ಮೂಲಕ ನೀಡಲಾದ ದೇಣಿಗೆ ವಿವರಗಳ ನೂತನ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, 2018ರಲ್ಲಿ ಆರಂಭವಾದ ಹೊಸ ಯೋಜನೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ 6985 .5 ಕೋಟಿ ರೂ. ದೇಣಿಗೆ ಪಡೆದಿರುವುದು ಬಹಿರಂಗವಾಗಿದೆ.
ರಾಜಕೀಯ ಪಕ್ಷಗಳಿಗೆ ನೀಡಲಾದ ದೇಣಿಯಲ್ಲಿ ನೋಟುಗಳ ಸಂಖ್ಯೆ, ಯಾವ ಮೊತ್ತದ ನೋಟು, ದಿನಾಂಕ ಸೇರಿದಂತೆ ಸಂಪೂರ್ಣ ವಿವರವನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಸಮಗ್ರ ವಿವರವನ್ನು ಬಿಡುಗಡೆ ಮಾಡಲಾಗಿದೆ.