Friday, October 18, 2024
Google search engine
Homeತಾಜಾ ಸುದ್ದಿBREAKING: ಭಾರತದ ಯುದ್ಧನೌಕೆ ಐಎನ್ ಎಸ್ ಬ್ರಹ್ಮಪುತ್ರದಲ್ಲಿ ಅಗ್ನಿ ದುರಂತ: ಯೋಧ ನಾಪತ್ತೆ!

BREAKING: ಭಾರತದ ಯುದ್ಧನೌಕೆ ಐಎನ್ ಎಸ್ ಬ್ರಹ್ಮಪುತ್ರದಲ್ಲಿ ಅಗ್ನಿ ದುರಂತ: ಯೋಧ ನಾಪತ್ತೆ!

ಭಾರತದ ವಾಯುಪಡೆಯ ಯುದ್ಧನೌಕೆ ಐಎಎಸ್ ಬ್ರಹ್ಮಪುತ್ರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇಡೀ ಹಡಗು ಸಮುದ್ರದಲ್ಲಿ ಮಗುಚಿಕೊಂಡಿದ್ದು, ಯೋಧ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ಸಂಭವಿಸಿದೆ.

ಮುಂಬೈನಲ್ಲಿ ಯುದ್ಧನೌಕೆಯ ನಿರ್ವಹಣೆಗಾಗಿ ನಿಲ್ಲಿಸಿದ್ದಾಗ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹಡಗಿಗೆ ವ್ಯಾಪಿಸಿದ್ದರಿಂದ ಒಂದು ಕಡೆ ವಾಲಿಕೊಂಡು ಸಮುದ್ರಕ್ಕೆ ಉರುಳಿದೆ.

ಕಿರಿಯ ನಾವಿಕ ನಾಪತ್ತೆಯಾಗಿದ್ದು, ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದು, ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಅನಾಹುತದಿಂದ ಹಡಗಿಗೆ ಆಗಿರುವ ನಷ್ಟದ ಕುರಿತು ಅಂದಾಜು ನಡೆಯುತ್ತಿದ್ದು, ದುರಸ್ಥಿ ಕಾರ್ಯ ನಡೆಯುತ್ತಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ, ವಾಯುಪಡೆ ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ಪ್ರಯತ್ನಗಳ ನಡುವೆಯೂ ಐಎನ್ಎಸ್ ಬ್ರಹ್ಮಪುತ್ರ ಒಂದು ಕಡೆ ವಾಲಿದ್ದು, ಇದನ್ನು ನಿಲ್ಲಿಸುವ  ಪ್ರಯತ್ನಗಳು ನಡೆಯುತ್ತಿದೆ. ಬಂದರಿನಲ್ಲಿ ನಿಲ್ಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಐಎನ್‌ ಎಸ್ ಬ್ರಹ್ಮಪುತ್ರ ಸ್ವದೇಶಿ ನಿರ್ಮಿತ ಯುದ್ಧನೌಕೆಯಾಗಿದ್ದು, ಏಪ್ರಿಲ್ 2000ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದು, ಹಡಗಿನಲ್ಲಿ 40 ಅಧಿಕಾರಿಗಳು ಮತ್ತು 330 ನಾವಿಕರ ಸಿಬ್ಬಂದಿ ಒಳಗೊಂಡಿದೆ.

ಮಧ್ಯಮ ಶ್ರೇಣಿ, ಸಮೀಪದ ವ್ಯಾಪ್ತಿಯ ದಾಳಿ ಮತ್ತು ವಿಮಾನ ವಿರೋಧಿ ಬಂದೂಕುಗಳನ್ನು ಒಳಗೊಂಡಿದೆ. ಭೂಮಿಯಿಂದ ಹಾಗೂ ಸಮುದ್ರದ ಮೇಲಿನಿಂದ ಕ್ಷಿಪಣಿ ದಾಳಿ ಹಾಗೂ ಸಮುದ್ರದಲ್ಲಿ ನಡೆಯುವ ಯಾವುದೇ ಮಾದರಿಯ ದಾಳಿಯನ್ನು ಎದುರಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ ವ್ಯಾಪಕವಾದ ಸಂವೇದಕಗಳನ್ನು ಹೊಂದಿದೆ ಮತ್ತು ಸೀಕಿಂಗ್ ಮತ್ತು ಚೇತಕ್ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಎನ್ ಎಸ್ ಬ್ರಹ್ಮಪುತ್ರ 5300 ಟನ್‌ ತೂಕ ಹೊಂದಿದ್ದು, 125 ಮೀಟರ್ ಉದ್ದ, 14.4 ಮೀಟರ್ ಅಗಲ ಹೊಂದಿದ್ದು, ಗಂಟೆಗೆ 27 ಕಿ.ಮೀ. ವೇಗವಾಗಿ ಸಂಚರಿಸಬಲ್ಲದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments