ಮಾಸಿಕ ಸಂಬಳ ಆಧರಿಸಿದ ವೈಯಕ್ತಿಕ ಆದಾಯ ತೆರಿಗೆ ಪಾವತಿ ಪದ್ಧತಿ ಮೇಲೆ ಬದಲಾವಣೆ ಮಾಡಲಾಗಿದ್ದು, ವಾರ್ಷಿಕ 3 ಲಕ್ಷ ರೂ. ಆದಾಯ ಹೊಂದಿದವರು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ನಲ್ಲಿ ಮಾಸಿಕ ವೇತನ 50 ಸಾವಿರ ರೂ. ಆದಾಯ ಹೊಂದಿದವರಿಗೆ ವಿಧಿಸಲಾಗುತ್ತಿದ್ದ ತೆರಿಗೆ ಮಿತಿಯನ್ನು 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ವಾರ್ಷಿಕ 17,500 ರೂ. ಉಳಿತಾಯ ಮಾಡಬಹುದಾಗಿದೆ.
ಗರಿಷ್ಠ 3 ಲಕ್ಷ ರೂ.ವರೆಗೆ ಆದಾಯ ಹೊಂದಿದವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ವಾರ್ಷಿಕ 3 ಲಕ್ಷದಿಂದ 7.5 ಲಕ್ಷದವರೆಗೆ ಶೇ.5 ತೆರಿಗೆ
ವಾರ್ಷಿಕ 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.10 ತೆರಿಗೆ
ವಾರ್ಷಿಕ 10 ಲಕ್ಷದಿಂದ 12 ಲಕ್ಷದವರೆಗೆ ಶೇ.20 ತೆರಿಗೆ
ವಾರ್ಷಿಕ 15 ಲಕ್ಷ ಮೇಲ್ಪಟ್ಟ ಆದಾಯ ಹೊಂದಿದವರಿಗೆ ಗರಿಷ್ಠ ಶೇ.30ರಷ್ಟು ತೆರಿಗೆ