ಅನುಭವಿ, ಕಠಿಣ ನಿರ್ಧಾರ ಕೈಗೊಳ್ಳಬಲ್ಲ ಸಮರ್ಥಳು ಆಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಅಮೆರಿಕ ಅಧ್ಯಕ್ಷ ಜೋ ಬಿಡೈನ್ ವಿದಾಯದ ಭಾಷಣದಲ್ಲಿ ಹೇಳಿದ್ದಾರೆ.
ಮೊದಲ ಬಾರಿ ಟಿವಿಯಲ್ಲಿ ಕಾಣಿಸಿಕೊಂಡ 81 ವರ್ಷದ ಜೋ ಬಿಡೈನ್, ಮುಂದಿನ ತಲೆಮಾರಿಗೆ ಅಧಿಕಾರ ಹಸ್ತಾಂತರಿಸುವ ಸಮಯ ಬಂದಿದೆ. ಅದನ್ನು ನಿಭಾಯಿಸುವ ಸಾಮರ್ಥ್ಯ ಕಮಲಾ ಹ್ಯಾರಿಸ್ ಅವರಿಗೆ ಇದೆ ಎಂದರು.
ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಕೊನೆ ಗಳಿಗೆಯಲ್ಲಿ ಕಣಕ್ಕಿಳಿದ 59 ವರ್ಷದ ಕಮಲಾ ಹ್ಯಾರಿಸ್ ಅಧ್ಯಕ್ಷ ಸ್ಥಾನಕ್ಕೆ ಸಮರ್ಥರಿದ್ದಾರೆ. ದೇಶದ ಪ್ರಜಾಪ್ರಭುತ್ವ ಅಲುಗಾಡುವ ಪರಿಸ್ಥಿತಿ ಇದೆ. ಇದನ್ನು ಉಳಿಸಿಕೊಳ್ಳುವುದು ಯಾವುದೇ ಪ್ರಶಸ್ತಿ ಗೆಲ್ಲುವುದಕ್ಕಿಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಅಮೆರಿಕ ಎಂಬುದು ಒಂದು ಯೋಚನೆ. ಆ ಯೋಚನೆ ಯಾವುದೇ ಸೇನೆಗಿಂತ ದೊಡ್ಡದು, ಯಾವುದೇ ಸಮುದ್ರಕ್ಕಿಂತ ದೊಡ್ಡದು. ಯಾವುದೇ ಸರ್ವಾಧಿಕಾರಿಗಿಂತ ದೊಡ್ಡದು. ಈ ಯೋಚನೆಯ ಮುಂದೆ ಯಾವುದೇ ಶಕ್ತಿಗಳು ನಿಲ್ಲಲು ಸಾಧ್ಯವಿಲ್ಲ ಎಂದು ಬಿಡೈನ್ ಹೇಳಿದರು.