ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ನೀರಿನಾಳದಲ್ಲಿ ಅಭ್ಯಾಸ ನಡೆಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಗೆ ವಿಭಿನ್ನವಾಗಿ ಸಜ್ಜಾಗುತ್ತಿದ್ದಾರೆ.
ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಗಾಗಿ ವಿಶೇಷ ತಯಾರಿ ನಡೆಸಿರುವ ವೀಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಕಾಶದಲ್ಲೇ ಆಗಲಿ, ನೆಲದ ಮೇಲಾಗಲಿ, ಅಥವಾ ನೀರಿನಾಳದಲ್ಲೇ ಆಗಲಿ! ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುವೆ. ತರಬೇತಿ ಶುರುವಾಗಿದೆ ಎಂದು ವೀಡಿಯೋ ಜೊತೆ ಶೀರ್ಷಿಕೆ ಹಾಕಿಕೊಂಡಿದ್ದಾರೆ.
ಟೊಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ ನೀರಜ್ ಚೋಪ್ರಾ ಈ ಬಾರಿಯ ಒಲಿಂಪಿಕ್ಸ್ ನಲ್ಲೂ ಚಿನ್ನದ ಪದಕ ಗೆಲ್ಲುವ ಫೇವರಿಟ್ ಸ್ಪರ್ಧಿಯಾಗಿದ್ದಾರೆ.
23 ವರ್ಷದ ನೀರಜ್ ಚೋಪ್ರಾ 86.65 ಮೀ. ದೂರ ಜಾವೆಲಿನ್ ಎಸೆದು ಒಲಿಂಪಿಕ್ಸ್ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ. ನೀರಜ್ ಚೋಪ್ರಾ 87.58 ಮೀ. ಎಸೆದಿರುವುದು ಗರಿಷ್ಠ ಸಾಧನೆಯಾಗಿದೆ.
ಜರ್ಮನಿಯ ಜೊಹಾನಿಸ್ ವಟ್ಟರ್ ವಿಶ್ವ ಅಥ್ಲೆಟಿಕ್ಸ್ ನಲ್ಲಿ 94.20 ಮೀ. ಎಸೆದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದು, ನೀರಜ್ ಚೋಪ್ರಾಗೆ ಈ ಬಾರಿ ಸವಾಲಾಗಿದ್ದಾರೆ.