ಬೆಂಗಳೂರಿನ ಲೇಡಿಸ್ ಹಾಸ್ಟೇಲ್ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ವ್ಯಕ್ತಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.
ಬಿಹಾರ ಮೂಲದ ಕೀರ್ತಿ ಕುಮಾರಿಯನ್ನು ಯುವಕ ಜುಲೈ 23ರಂದು ಕೋರಮಂಗಲದಲ್ಲಿರುವ ಹಾಸ್ಟೇಲ್ ಒಳಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದಿದ್ದ. ಕೊಲೆ ಮಾಡಿದ ವ್ಯಕ್ತಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದ್ದು, ಈತ ಕೊಲೆ ಮಾಡಿದ ಬೆನ್ನಲ್ಲೇ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದ.
ಅಭಿಷೇಕ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಬೆನ್ನು ಹತ್ತಿದ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದು, ಕೊಲೆಗೆ ಕಾರಣ ತಿಳಿಯಲಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಪಿಜಿಗೆ ಯಾವುದೇ ಭದ್ರತೆ ಇಲ್ಲದ ಕಾರಣ ಹಾಸ್ಟೇಲ್ ಗೆ ನುಗ್ಗಿದ ಅಭಿಷೇಕ್ ಕೀರ್ತಿ ಕುಮಾರಿ ಕೊಠಡಿಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಆಕೆಯನ್ನು ಎಳೆದೊಯ್ದು ಮೂಲೆಯೊಂದಲ್ಲಿ ಕತ್ತು ಸೀಳಿ ಕೊಲೆ ಮಾಡಿದ್ದ.
ಭಯಾನಕ ಘಟನೆಯನ್ನು ಯುವತಿಯನ್ನು ನೋಡಿದರೂ ಯಾರೂ ರಕ್ಷಣೆಗೆ ಬಂದಿರಲಿಲ್ಲ. ಅಲ್ಲದೇ ಪಿಜಿಯಲ್ಲಿ ಭದ್ರತಾ ವ್ಯವಸ್ಥೆ ಮಾಡದೇ ಇರುವುದು ಮಾಲೀಕನ ತಪ್ಪು ಎಂದು ಪೊಲೀಸರು ತಿಳಿಸಿದ್ದಾರೆ.