ಪದಕ ಗೆಲ್ಲುವ ಭರವಸೆ ಮೂಡಿಸಿರುವ ಭಾರತದ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ ನ ಎರಡನೇ ದಿನವಾದ ಆಶಾಕಿರಣ ಮೂಡಿಸಿದ್ದಾರೆ.
10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 3ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿರುವ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ ನ ಎರಡನೇ ದಿನವಾದ ಭಾನುವಾರ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಮನು ಬಂಗಾರದ ಪದಕ ಗೆಲ್ಲುವ ಸಾಧ್ಯತೆ ಇದ್ದರೂ ಕನಿಷ್ಠ ಪದಕ ಗೆದ್ದರೂ ಭಾರತ ಪದಕ ಪಟ್ಟಿಯಲ್ಲಿ ಖಾತೆ ತೆರೆಯಲಿದೆ.
ಇದೇ ವೇಳೆ ಆರ್ಚರಿ ವಿಭಾಗದ ನಾಕೌಟ್ ಹಂತದ ಪಂದ್ಯಗಳು ಕೂಡ ನಡೆಯಲಿದ್ದು, ಈಗಾಗಲೇ ರ್ಯಾಂಕಿಂಗ್ ವಿಭಾಗದ ಪುರುಷ, ಮಹಿಳೆ ಮತ್ತು ಮಿಶ್ರ ವಿಭಾಗಳಲ್ಲಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಆರ್ಚರಿಯಲ್ಲೂ ಕನಿಷ್ಠ ಪದಕವನ್ನು ನಿರೀಕ್ಷಿಸಬಹುದಾಗಿದೆ. ಆರ್ಚರಿಯಲ್ಲಿ ಅಂಕಿತಾ ಭಾಗತ್, ದೀಪಿಕಾ ಕುಮಾರಿ, ಭಜನ್ ಕೌರ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಮತ್ತು ಪ್ರಣೋಯ್ ಕಣಕ್ಕಿಳಿಯಲಿದ್ದರೆ, ಬಾಕ್ಸಿಂಗ್ ನ 50 ಕೆಜಿ ವಿಭಾಗದಲ್ಲಿ ನಿಖಿತ್ ಜರೀನ್ ಸ್ಪರ್ಧಿಸಲಿದ್ದಾರೆ. ಟೆನಿಸ್ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಮತ್ತು ಸಿಂಗಲ್ಸ್ ನಲ್ಲಿ ಸುಮಿತ್ ನಗಲ್ ತಮ್ಮ ಅದೃಷ್ಟ ಪರೀಕ್ಷೆಯನ್ನು ಆರಂಭಿಸಲಿದ್ದಾರೆ.