Thursday, September 19, 2024
Google search engine
Homeಆರೋಗ್ಯ1500 ಮಂದಿಗೆ ಫರ್ಟಿಲಿಟಿ ಯಶಸ್ಚಿ ಚಿಕಿತ್ಸೆ: ಸೀಮಂತ ಮಾಡಿ ಸಂಭ್ರಮಿಸಿದ ಓಯಸಿಸ್ ಫರ್ಟಿಲಿಟಿ ಸಂಸ್ಥೆ

1500 ಮಂದಿಗೆ ಫರ್ಟಿಲಿಟಿ ಯಶಸ್ಚಿ ಚಿಕಿತ್ಸೆ: ಸೀಮಂತ ಮಾಡಿ ಸಂಭ್ರಮಿಸಿದ ಓಯಸಿಸ್ ಫರ್ಟಿಲಿಟಿ ಸಂಸ್ಥೆ

ದೇಶದ ಫರ್ಟಿಲಿಟಿ ಕೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಓಯಸಿಸ್ ಫರ್ಟಿಲಿಟಿ ಇಂದು ಪೋಷಕರಾಗುವ ಹಂಬಲ ಹೊಂದಿದ್ದ ಸುಮಾರು 1500 ಮಂದಿಗೆ ಯಶಸ್ವಿ ಚಿಕಿತ್ಸೆ ನೀಡಿರುವ ಸಂತೋಷಕ್ಕೆ ಮತ್ತು ಈ ಮೂಲಕ ಫರ್ಟಿಲಿಟಿ ಕೇರ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧನೆ ಮಾಡಿರುವುದಕ್ಕೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿ ಸಂಭ್ರಮಾಚರಿಸಿದೆ.

ಬನಶಂಕರಿಯ ಓಯಸಿಸ್ ಫರ್ಟಿಲಿಟಿ ಆಸ್ಪತ್ರೆಯು ತನ್ನ ಅತ್ಯಾಧುನಿಕ ಸೌಲಭ್ಯಗಳು ಮತ್ತು ರೋಗಿ ಕೇಂದ್ರಿತ ವಿಧಾನಗಳ ಮೂಲಕ ಸ್ಥಳೀಯ ಫರ್ಟಿಲಿಟಿ ಕೇರ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ್ದು, ಈ ಪ್ರದೇಶಗಳ ದಂಪತಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ಸು ಪಡೆದಿದೆ.

ಬನಶಂಕರಿಯ ಓಯಸಿಸ್ ಫರ್ಟಿಲಿಟಿ ಆಸ್ಪತ್ರೆ ಪ್ರಾರಂಭ ಆದಾಗಿನಿಂದಲೂ ಐವಿಎಫ್, ಐಸಿಎಸ್‌ಐ ಪಿಜಿಟಿ, ಎಆರ್‌ಎ, ಟೆಸಾ ಮತ್ತು ಓಸೈಟ್ ಮತ್ತು ಸ್ಪರ್ಮ್ ಕ್ರಯೋಪ್ರೆಸರ್ವೇಶನ್ ಜೊತೆಗೆ ಮೈಕ್ರೋಫ್ಲೂಯಿಡಿಕ್ಸ್‌ ನಂತಹ ವಿವಿಧ ವೀರ್ಯ ಆಯ್ಕೆ ವಿಧಾನಗಳು ಮುಂತಾದ ಅತ್ಯಾಧುನಿಕ ವಿಧಾನಗಳ ಮೂಲಕ ಪೋಷಕರಾಗುವ ದಂಪತಿಗಳ ಕನಸನ್ನು ನನಸು ಮಾಡಲು ಯಶಸ್ವಿಯಾಗಿ ನೆರವಾಗಿದೆ. ಅದರ ಜೊತೆಗೆ ಫಲವತ್ತತೆ ಹೆಚ್ಚಿಸುವ ಶಸ್ತ್ರ ಚಿಕಿತ್ಸೆಗಳನ್ನೂ ಯಶಸ್ವಿಯಾಗಿ ಮಾಡಿದೆ. ಪಿಜಿಟಿ- ಎ ಸೇರಿ ಹಲವು ಅತ್ಯಾಧುನಿಕ ಫರ್ಟಿಲಿಟಿ ಚಿಕಿತ್ಸೆಗಳನ್ನು ಪರಿಚಯಿಸಿರುವ ಕಾರಣದಿಂದ ಓಯಸಿಸ್ ಆಸ್ಪತ್ರೆಯು ಈ ಪ್ರದೇಶದಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇವೆ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಆಸ್ಪತ್ರೆಯು ರೋಗಿಗಳ ಆರೈಕೆಯಲ್ಲಿನ ಗುಣಮಟ್ಟ ಮತ್ತು ಶ್ರೇಷ್ಠತೆಯ ಕಾರಣಕ್ಕೆ ವಿವಿಧ ಮಾನ್ಯತೆ ಮತ್ತು ಪುರಸ್ಕಾರಗಳನ್ನು ಗಳಿಸಿದೆ.

ಕಳೆದ ಹಲವು ವರ್ಷಗಳಿಂದ ಬನಶಂಕರಿಯ ಓಯಸಿಸಿ ಫರ್ಟಿಲಿಟಿ ಆಸ್ಪತ್ರೆಯು ಪೋಷಕಾಗಲು ಬಯಸುವ ದಂಪತಿಗಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಶ್ರಮಿಸುತ್ತಿದೆ ಮತ್ತು ಗರ್ಭಧಾರಣೆ ಚಿಕಿತ್ಸೆಗಳಲ್ಲಿ ಗಣನೀಯ ಯಶಸ್ಸನ್ನು ಸಾಧಿಸಿದೆ. ಫರ್ಟಿಲಿಟಿ ಕೇರ್ ಕ್ಷೇತ್ರದಲ್ಲಿನ ಆಸ್ಪತ್ರೆಯ ಪರಿಣತಿ ಹಾಗೂ ಬದ್ಧತೆ ಮತ್ತು ಹಲವು ಸಂಕೀರ್ಣ ಫಲವತ್ತತೆ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿರುವುದರಿಂದ ಈ ಆಸ್ಪತ್ರೆಯನ್ನು ಈ ಕ್ಷೇತ್ರದಲ್ಲಿನ ವಿಶ್ವಾಸಾರ್ಹ ಹೆಸರನ್ನಾಗಿ ಮಾಡಿದೆ. ವಿಶೇಷವೆಂದರೆ ಇಲ್ಲಿ ಕೊಂಚ ಹೆಚ್ಚು ವಯಸ್ಸಿನ (42-45 ವರ್ಷಗಳು) ಅನೇಕ ರೋಗಿಗಳು ಯಶಸ್ವಿಯಾಗಿ ಗರ್ಭಧರಿಸಿರುವ ಉದಾಹರಣೆ ಇದೆ. ಬಹು ಗರ್ಭಪಾತ ಹೊಂದಿರುವ ರೋಗಿಗಳು (4) ಐವಿಎಫ್ ಮತ್ತು ಪಿಜಿಟಿ- ಎ ನೆರವಿನಿಂದ ಗರ್ಭಧರಿಸಿದ್ದಾರೆ ಮತ್ತು ತಮ್ಮ ಕನಸು ನನಸಾಗುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಮಲ್ಟಿಪಲ್ ಇಂಪ್ಲಾಂಟೇಶನ್ ಫೈಲ್ಯೂರ್ (ಹಲವು ಬಾರಿ ಇಂಪ್ಲಾಂಟ್ ಮಾಡಿದರೂ ವೈಫಲ್ಯತೆ) ಅನುಭವಿಸಿರುವ ರೋಗಿಗಳು (3 ಕ್ಕಿಂತ ಹೆಚ್ಚು ) ಇಲ್ಲಿ ಲಭ್ಯವಿರುವ ಅತ್ಯಾಧುನಿಕ ಮತ್ತು ಪರಿಣಿತ ಚಿಕಿತ್ಸೆಯ ಸಹಾಯದಿಂದ ಮೊದಲ ಪ್ರಯತ್ನದಲ್ಲಿಯೇ ಗರ್ಭಧರಿಸಿದ್ದಾರೆ.

ಓಯಸಿಸ್ ಫರ್ಟಿಲಿಟಿಯ ಸಹ ಸಂಸ್ಥಾಪಕಿ ಮತ್ತು ವೈದ್ಯಕೀಯ ನಿರ್ದೇಶಕಿ ಡಾ.ದುರ್ಗಾ ಜಿ.ರಾವ್ ಮಾತನಾಡಿ, “ಐವಿಎಫ್ ಬಗ್ಗೆ ಸಮಾಜದಲ್ಲಿರು ತಪ್ಪು ಕಲ್ಪನೆಗಳನ್ನು ತೊಡೆಯುವುದು ಬಹಳ ಮುಖ್ಯ. ಸಹಜವಾಗಿ ಜನಿಸಿರುವ ಮಕ್ಕಳಂತೆಯೇ ಐವಿಎಫ್ ಶಿಶುಗಳು ಕೂಡ ಆರೋಗ್ಯಕರವಾಗಿರುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಫಲವತ್ತತೆ ಚಿಕಿತ್ಸೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಅಸಂಖ್ಯಾತ ದಂಪತಿಗಳಿಗೆ ಪರಿಹಾರ ಮತ್ತು ನೆಮ್ಮದಿ ದೊರಕಿಸುವ ಮೂಲಕ ಸಕ್ಸಸ್ ರೇಟ್ ಗಳನ್ನು ಮತ್ತಷ್ಟು ಹೆಚ್ಚು ಮಾಡಿವೆ. ಓಯಸಿಸ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ನಾವು ರೋಗಿಗಳಿಗೆ ತಪ್ಪು ಮಾಹಿತಿಗಳನ್ನು ತೊಡೆಯಲು ಸೂಕ್ತವಾದ ವಾಸ್ತವ ಮಾಹಿತಿಯನ್ನು ಒದಗಿಸುತ್ತೇವೆ. ಐವಿಎಫ್ ಹಾಗೂ ಇತರ ಗರ್ಭಧಾರಣಾ ತಂತ್ರಜ್ಞಾನಗಳ ಯಶಸ್ಸಿನ ಕುರಿತ ಸಂಶೋಧನೆಗಳು ಮತ್ತು ನಮ್ಮ ಗ್ರಾಹಕರು ನೀಡಿರುವ ಮೆಚ್ಚುಗೆಯ ನುಡಿಗಳು ನಾವು ಒದಗಿಸುವ ಸುರಕ್ಷತೆ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಸಾಕ್ಷಿಯಾಗಿವೆ” ಎಂದು ಹೇಳಿದರು.

ಬನಶಂಕರಿಯ ಓಯಸಿಸ್ ಫರ್ಟಿಲಿಟಿಯ ಕನ್ಸಲ್ಟೆಂಟ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ. ಪ್ರಿಂಕಾ ಬಜಾಜ್ ಮಾತನಾಡಿ, “ಅತ್ಯಾಧುನಿಕ ಫಲವತ್ತತೆ ಚಿಕಿತ್ಸೆಯನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗಿಸುವುದು ಮತ್ತು ಯಶಸ್ವಿ ಚಿಕಿತ್ಸೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಹೊಸ ವೈಜ್ಞಾನಿಕ ಅಭಿವೃದ್ಧಿಗಳು ಮತ್ತು ಸಹಾನುಭೂತಿಯ ನೆರವನ್ನು ಒದಗಿಸುವ ಮೂಲಕ ಪೋಷಕರಾಗುವ ಕನಸನ್ನು ಕಾಣುವ ಪ್ರತಿಯೊಬ್ಬ ರೋಗಿಯು ಕನಸನ್ನು ನನಸು ಮಾಡಲು, ಭರವಸೆ ಹೆಚ್ಚಿಸಲು ಮತ್ತು ವಿವಿಧ ಸಮುದಾಯಗಳ ಕುಟುಂಬಗಳ ಸಂತೋಷ ಹೆಚ್ಚಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದರು.

ವಿಶ್ವ ಐವಿಎಫ್ ದಿನಾಚರಣೆ ಸಂಭ್ರಮದ ಸಂದರ್ಭದಲ್ಲಿ ಓಯಸಿಸ್ ಫರ್ಟಿಲಿಟಿ ಭಾರತದಲ್ಲಿರುವ ತನ್ನ ಎಲ್ಲಾ ಆಸ್ಪತ್ರೆಗಳಲ್ಲಿ ಜುಲೈ 25 ರಿಂದ 28ರವರೆಗೆ “ಬ್ರೇಕ್ ದಿ ಟೆಸ್ಟ್ ಟ್ಯೂಬ್/ಬ್ರೇಕ್ ದಿ ಟ್ಯಾಬೂ” ಎಂಬ ಅಭಿಯಾನವನ್ನು ನಡೆಸಿತ್ತು. ಐವಿಎಫ್ ಕುರಿತ ತಪ್ಪು ಕಲ್ಪನೆಗಳನ್ನು ತೊಡೆಯುವ ಮತ್ತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜೀಸ್ (ಎ ಆರ್ ಟಿ) ಸುರಕ್ಷತೆ ಹಾಗೂ ಬೆಳವಣಿಗೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments