ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾತಿ ನಿಂದನೆ ಮಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡಿಸಿವೆ.
ಲೋಕಸಭೆಯ ಕಲಾಪದ ವೇಳೆ ರಾಹುಲ್ ಗಾಂಧಿ ಅವರನ್ನು ಜಾತಿಯನ್ನು ಉಲ್ಲೇಖಿಸಿ ವೈಯಕ್ತಿಕ ನಿಂದನೆ ಮಾಡಿದ 5 ಬಾರಿಯ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನುರಾಗ್ ಥಾಕೂರ್ ಅವರ ಹೇಳಿಕೆಯನ್ನು ಸಮರ್ಥಿಸುವ ಮೂಲಕ ಪ್ರಧಾನಿ ಸದನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜಲಂಧರ್ ಸಂಸದ ಹಾಗೂ ಪಂಜಾಬ್ ನ ಮಾಜಿ ಸಿಎಂ ಚರಣ್ ಜೀತ್ ಸಿಂಗ್ ಲೋಕಸಭಾ ಕಾರ್ಯದರ್ಶಿ ಅವರಿಗೆ ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ದೂರು ಸಲ್ಲಿಸಿದ್ದಾರೆ.
ಅನುರಾಗ್ ಥಾಕೂರ್ ಅವರ ಕೆಲವು ಮಾತುಗಳು ಅಸಂವಿಧಾನಿಕವಾಗಿವೆ. ಸದನದ ನಿಯಮಕ್ಕೆ ವಿರುದ್ಧದ ಮಾತುಗಳನ್ನು ಆಡಿದ್ದರೂ ಅದನ್ನು ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕದ ಸದನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೇ ಸ್ವತಃ ಪ್ರಧಾನಿಯವರೇ ಸದನದ ಕಲಾಪಕ್ಕೆ ವಿರುದ್ಧವಾದ ಶಬ್ಧಗಳನ್ನು ಬಳಸಿ ಥಾಕೂರ್ ಅವರ ಭಾಷಣವನ್ನು ಪ್ರಚೋದಿಸಿದ್ದಾರೆ ಎಂದು ಚರಣ್ ಜೀತ್ ಸಿಂಗ್ ಪತ್ರದಲ್ಲಿ ಆರೋಪಿಸಿದ್ದಾರೆ.