ಜುಲೈ ಅಂತ್ಯದ ವೇಳೆಗೆ ಬೃಹತ್ ಮಹಾನಗರ ಪಾಲಿಕೆ ಸಾರ್ವಕಾಲಿಕ ದಾಖಲೆಯ 3200 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ 800 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. ಆದರೆ ಈ ಬಾರಿ 4 ಪಟ್ಟು ಅಧಿಕ ತೆರಿಗೆ ಸಂಗ್ರಹ ಮಾಡಿ ದಾಖಲೆ ಬರೆದಿದೆ.
ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಕಳೆದ 10ರಿಂದ 12 ದಿನಗಳಲ್ಲಿ 1200 ಕೋಟಿ ರೂ. ಸಂಗ್ರಹಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ.
1.2 ಲಕ್ಷ ರೂ. ಮೌಲ್ಯದ ತೆರಿಗೆ ಬಾಕಿ ಉಳಿಸಿಕೊಂಡಿದ್ದವರಿಂದ ಒಂದು ಬಾರಿಯ ಸೆಟ್ಲ್ ಮೆಂಟ್ ಯೋಜನೆಯಡಿ 380 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೌನಿಷ್ ಮುದ್ಗಿಲ್ ಹೇಳಿದ್ದಾರೆ.
ತೆರಿಗೆ ಸಂಗ್ರಹದಲ್ಲಿ 150 ಕೋಟಿಯಷ್ಟು ಮೊತ್ತ ಚೆಕ್ ಮತ್ತು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಂಗ್ರಹಿಸಲಾಗಿದೆ ಎಂದು ಮೌನಿಷ್ ಮುದ್ಗಿಲ್ ತಿಳಿಸಿದ್ದಾರೆ.