ತಪ್ಪು ಸಂದೇಶ ಸಾರುವ ಜಾಹಿರಾತು ಪ್ರದರ್ಶನ ಮಾಡಿರುವ ಪ್ರಕರಣದಲ್ಲಿ 2 ವಾರದೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪತಾಂಜಲಿ ಮುಖ್ಯಸ್ಥ ಬಾಬಾ ರಾಮ್ ದೇವ್ ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಬಾಬಾ ರಾಮ್ ದೇವ್ ಅಲ್ಲದೇ ಪತಾಂಜಲಿ ಆಯುರ್ವೇದಿಕ್ ಮಾರುಕಟ್ಟೆ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಪತಂಜಲಿ ಉತ್ಪನ್ನ ಬಳಸುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ಅಸ್ವಸ್ಥತೆ ಸೇರಿದಂತೆ ಹಲವು ಕಾಯಿಲೆಗಳು ಗುಣಮುಖ ಆಗುತ್ತವೆ ಎಂದು ಜಾಹಿರಾತಿನಲ್ಲಿ ತೋರಿಸಲಾಗುತ್ತಿದೆ. ಆದರೆ ಇದು ವೈದ್ಯಕೀಯವಾಗಿ ಸುಳ್ಳಾಗಿದೆ ಎಂದು ಆರೋಪಿಸಲಾಗಿದೆ.
ಭಾರತೀಯ ವೈದ್ಯಕೀಯ ಸಂಸ್ಥೆ ಪತಂಜಲಿ ಸಂಸ್ಥೆ ಆಧುನಿಕ ವೈದ್ಯ ಪದ್ಧತಿ ಖಂಡಿಸಿದ್ದು, ವೈದ್ಯರು ಸುಳ್ಳು ಹೇಳಿ ಹಣ ವಸೂಲು ಮಾಡುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆ ಉತ್ತಮ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಪತಂಜಲಿ ಈ ರೀತಿ ಸುಳ್ಳು ಪ್ರಚಾರ ಮಾಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.