ಅನುಕೂಲಕ್ಕೆ ತಕ್ಕಂತೆ ಉಪವಾಸ ಮಾಡುವುದು ಅಥವಾ ತೂಕ ಕಡಿಮೆ ಮಾಡಿಕೊಳ್ಳಲು ಕಡಿಮೆ ಆಹಾರ ಸೇವಿಸುವುದು ಮಾಡುವುದರಿಂದ ಹೃದಯಾಘಾತ ಸಂಭವಿಸುವ ಪ್ರಮಾಣ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ.
ಚಿಕಾಗೊದಲ್ಲಿರುವ ಅಮೆರಿಕದ ಹಾರ್ಟ್ ಅಸೋಸಿಯೇಷನ್ ನ ವೈದ್ಯಕೀಯ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಆಹಾರ ಸೇವನೆ ಅವಧಿಯನ್ನು 8 ಗಂಟೆಗೆ ಕಡಿತಗೊಳಿಸುವವರಲ್ಲಿ ಹೃದಯಾಘಾತ ಸಂಭವಿಸುವ ಪ್ರಮಾಣ ಶೇ.91ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
ನಿಗದಿತ ಅವಧಿಯಲ್ಲಿ ಆಹಾರ ಸೇವಿಸುವುದನ್ನು ಬಿಡುವುದು ಹಾಗೂ ಹೊಸ ತಲೆಮಾರಿನ ಔಷಧಗಳ ಪ್ರಭಾವದಿಂದ ಭೋಜನ ಸೇವಿಸದೇ ಇರುವುದು ಹೃದಯಾಘಾತ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ವರದಿ ಹೇಳಿದೆ. ಈ ವರದಿ ಬಗ್ಗೆ ಕೆಲವು ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಹೊಸ ತಲೆಮಾರಿನ ಮಾತ್ರೆಗಳು ಈ ಸಮಸ್ಯೆಗಳನ್ನು ನೀಗಿಸುತ್ತವೆ ಎಂದು ಹೇಳಿದ್ದಾರೆ.
2013ರಿಂದ 2019ರ ಅವಧಿಯಲ್ಲಿ ರೋಗಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಅರ್ಧದಷ್ಟು ಪುರುಷ ಹಾಗೂ ಮಹಿಳೆಯರ ವಯಸ್ಸು 48 ವರ್ಷ ಮೇಲ್ಪಟ್ಟದ್ದಾಗಿದೆ. ಅಲ್ಲದೇ ಪ್ರತಿದಿನ 12ರಿಂದ 16 ಗಂಟೆಗಳ ಅಂತರದಲ್ಲಿ ಆಹಾರ ಸೇವಿಸುತ್ತಿದ್ದು, ನಂತರ ಕಡಿಮೆ ಮಾಡಿದ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.