ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಿಗೆ ಓಡಿಸೋದಕ್ಕೆ ಪ್ರಯತ್ನಿಸಿದಂತ ವೇಳೆಯಲ್ಲಿ ದಾಳಿ ಮಾಡಿ ಐವರು ಬಲಿಯಾಗಿದ್ದರು. ಇಂದು ಮತ್ತೆ ಕಾಡಾನೆ ದಾಳಿ ಮುಂದುವರೆದಿದೆ. ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವರ್ತೆಗುಂಡಿಯ ಟಿಂಬರ್ ಕಾರ್ಮಿಕ ಅಕ್ಬರ್ ಎಂಬುವರೇ ಸಾವನ್ನಪ್ಪಿದಂತ ವ್ಯಕ್ತಿಯಾಗಿದ್ದಾರೆ. ತೋಟದಲ್ಲಿ ಆನೆ ಓಡಿಸುವಾಗ ನುಗ್ಗಿ ಬಂದ ಆನೆಗಳನ್ನು ಕಂಡು ನೆಲಕ್ಕೆ ಬಿದ್ದಂತ ಅಕ್ಬರ್ ಆಲಿಯನ್ನು ಕಾಡಾನೆ ತುಳಿದು ಸಾಯಿಸಿರೋದಾಗಿ ತಿಳಿದು ಬಂದಿದೆ.
ಕಾಡಾನೆಗೆ ದಾಳಿಗೆ ಚಿಕ್ಕಮಗಳೂರಲ್ಲಿ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಇಂದು ಟಿಂಬರ್ ಕಾರ್ಮಿಕ ಅಕ್ಬರ್ ಎಂಬುವರನ್ನು ಕಾಡಾನೆ ತುಳಿದು ಸಾಯಿಸಿದೆ.
ಕಾಡಾನೆ ನಿಯಂತ್ರಣ ಮಾಡದೇ ದಿನೇ ದಿನೇ ಜನರ ಮೇಲೆ ದಾಳಿ ನಡೆದು ಸಾವನ್ನಪ್ಪುತ್ತಿದ್ದಾರೆ ಎಂಬುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.